ಶ್ರೀಮಂತರು ತಮ್ಮ ಜೀವನ ಶೈಲಿಯಲ್ಲಿ ಮಿತಿಮೀರಿದ ವರ್ತನೆ ಮೂಲಕ ಚರ್ಚೆಗೆ ಗ್ರಾಸವಾಗುವುದುಂಟು. ವಿಶ್ವದ ಅತ್ಯುತ್ತಮ ಬಾಣಸಿಗರನ್ನು ನೇಮಿಸಿಕೊಳ್ಳುವುದರಿಂದ ಹಿಡಿದು ಡಿಸೈನರ್ ಬಟ್ಟೆಗಳನ್ನು ಖರೀದಿಸುವುದು ಮತ್ತು ವಿಹಾರ ನೌಕೆಯನ್ನು ಹೊಂದುವುದು ಶ್ರೀಮಂತರ ಪಾಲಿಗೆ ಸಾಮಾನ್ಯವಾಗಿದೆ.
ಇದೆಲ್ಲವೂ ನವಜಾತ ಶಿಶುವಿಗೆ ಸೇರಿದೆ ಎಂದು ಊಹಿಸಲು ಸಾಧ್ಯವೇ? ಐವತ್ತೆರೆಡು ವರ್ಷದ ಬ್ಯಾರಿ ಡ್ರೆವಿಟ್-ಬಾಲೋರ್ ಅವರೊಂದಿಗೆ ಎಂಗೇಜ್ ಆದ 27 ವರ್ಷದ ಸ್ಕಾಟ್ ಹಚಿನ್ಸನ್ ಆಗಸ್ಟ್ 12ರಂದು ಬಾಡಿಗೆ ತಾಯ್ತನದ ಮೂಲಕ ಗಂಡು ಮಗು ಪಡೆದರು. ರೋಮಿಯೋ ಟಾಕಿರ್ನ್ ಹೆಸರಿನ ಮಗುವನ್ನು ಬರಮಾಡಿಕೊಂಡರು. ಈ ನವಜಾತ ಶಿಶುವಿಗೆ ಶ್ರೀಮಂತ ಪೋಷಕರು ದುಬಾರಿ ಉಡುಗೊರೆಗಳನ್ನು ನೀಡಿದರು.
ಮಗು ಹುಟ್ಟುವ ಮೊದಲು, ಬಟ್ಟೆಗಾಗಿ 10 ಸಾವಿರ ಪೌಂಡ್ ಖರ್ಚು ಮಾಡಿದ್ದು, ಅವನು ಹುಟ್ಟಿದ ಕ್ಷಣದಲ್ಲಿ ಮತ್ತೆ 20 ಸಾವಿರ ಪೌಂಡ್ವೆಚ್ಚ ಮಾಡಿದ್ದಾರೆ. ಅವರು ರೋಮಿಯೋಗಾಗಿ 2.5 ಮಿಲಿಯನ್ ಪೌಂಡ್ (ಸುಮಾರು ರೂ 22.3 ಕೋಟಿ) ವೆಚ್ಚದ ವಿಹಾರ ನೌಕೆಯನ್ನು ಸಹ ಖರೀದಿಸಿದ್ದಾರೆ.
ರೋಮಿಯೋಗಿಂತ ಮೊದಲು ಹುಟ್ಟಿದ ವ್ಯಾಲೆಂಟಿನಾ ತನ್ನ ಪುಟ್ಟ ಸಹೋದರನನ್ನು ತುಂಬಾ ಇಷ್ಟಪಡುತ್ತಾಳೆ. ಅವಳು ವೈಯಕ್ತಿಕ ಅಡುಗೆಯವರು, ಹೇರ್ ಸ್ಟೈಲಿಸ್ಟ್, ಇತ್ತೀಚಿನ ಗ್ಯಾಜೆಟ್ಗಳು ಮತ್ತು ಆಟಿಕೆಗಳಿಂದ ತುಂಬಿರುವ ಆಟದ ಕೋಣೆ, ಪೂರ್ಣ ಸಮಯದ ಜೊತೆಗಿರುವ ಲೈವ್ -ಇನ್ ದಾದಿ, ಅವಳ ಪ್ರತಿಯೊಂದು ಅಗತ್ಯವನ್ನು ನೋಡಿಕೊಳ್ಳುವ ಮನೆ ಸಿಬ್ಬಂದಿಯ ತಂಡವನ್ನು ಹೊಂದಿದ್ದಾಳೆ.