ಕಳೆದ ಆರು ತಿಂಗಳಿನಿಂದ ಒಂದೇ ಒಂದು ಕೋವಿಡ್ ಪ್ರಕರಣ ದಾಖಲಾದ ಕಾರಣಕ್ಕೆ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲು ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್ಡನ್ ಆದೇಶಿಸಿದ್ದಾರೆ.
ಆಕ್ಲೆಂಡ್‌ನಲ್ಲಿ ಒಂದೇ ಒಂದು ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾದ ಬೆನ್ನಿಗೇ ಬುಧವಾರದಿಂದ ಇಡೀ ದೇಶವನ್ನೇ ಮೂರು ದಿನಗಳ ಮಟ್ಟಿಗೆ ಲಾಕ್‌ಡೌನ್ ಘೋಷಿಸಲಾಗಿದೆ. ಸೋಂಕಿತ ವ್ಯಕ್ತಿ ಓಡಾಡಿ ಬಂದಿರುವ ಆಕ್ಲೆಂಡ್ ಹಾಗೂ ಕೊರೊಮಂಡೆಲ್ ಪಟ್ಟಣಗಳನ್ನು ಒಂದು ವಾರದ ಮಟ್ಟಿಗೆ ಲಾಕ್‌ಡೌನ್ ಮಾಡಲಾಗಿದೆ.
ಮೊಬೈಲ್ ನಲ್ಲಿ ಸೆರೆಯಾಯ್ತು ವಿಮಾನ ನೆಲಕ್ಕಪ್ಪಳಿಸುವ ಭೀಕರ ದೃಶ್ಯ
ಅತ್ಯಂತ ಬಿಗಿಯಾದ ನಾಲ್ಕನೇ ಹಂತದ ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು, ಶಾಲೆಗಳು, ಕಚೇರಿಗಳು ಹಾಗೂ ಎಲ್ಲಾ ವಹಿವಾಟುಗಳು ಸ್ಥಗಿತಗೊಂಡಿದ್ದು, ಅತ್ಯಗತ್ಯ ವಸ್ತುಗಳು/ಸೇವೆಗಳ ಪೂರೈಕೆಗೆ ಮಾತ್ರವೇ ಅವಕಾಶ ನೀಡಲಾಗಿದೆ.