alex Certify BIG NEWS: ಈ ದೇಶದ ಮುಂದಿನ ಪೀಳಿಗೆಗೆ ಇನ್ಮುಂದೆ ಸಿಗೋಲ್ಲ ಸಿಗರೇಟ್; ತಂಬಾಕು ಮುಕ್ತ ರಾಷ್ಟ್ರವಾಗಲು ದಿಟ್ಟ ಹೆಜ್ಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ದೇಶದ ಮುಂದಿನ ಪೀಳಿಗೆಗೆ ಇನ್ಮುಂದೆ ಸಿಗೋಲ್ಲ ಸಿಗರೇಟ್; ತಂಬಾಕು ಮುಕ್ತ ರಾಷ್ಟ್ರವಾಗಲು ದಿಟ್ಟ ಹೆಜ್ಜೆ

ತಂಬಾಕು ಸೇವನೆಯಿಂದ ವಿಶ್ವದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ತುಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತಂತೆ ಅರಿವು ಮೂಡಿಸಲು ಜಾಗೃತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಇಷ್ಟಾದರೂ ಕೂಡ ಸಿಗರೇಟ್, ಬೀಡಿ ಗುಟ್ಕಾ ಸೇವನೆ ಕಡಿಮೆಯಾಗಿಲ್ಲ.

ಇದರ ಮಧ್ಯೆ ರಾಷ್ಟ್ರವೊಂದು ತಂಬಾಕು ಮುಕ್ತವಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಮುಂದಿನ ವರ್ಷ ಅಂದರೆ 2023 ರಿಂದ ಜನವರಿ 1, 2009 ಹಾಗೂ ಆ ಬಳಿಕ ಜನಿಸಿದವರಿಗೆ ತಂಬಾಕು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೌದು, ನ್ಯೂಜಿಲೆಂಡ್ ಇಂತಹದೊಂದು ಮಹತ್ವದ ಮಸೂದೆಯನ್ನು ಅಲ್ಲಿನ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ.

ನೂತನ ಕಾಯ್ದೆ ಪ್ರಕಾರ 14 ವರ್ಷ ಅಥವಾ ಅದಕ್ಕಿಂತ ಒಳಗಿನ ವಯೋಮಾನದವರಿಗೆ ಸಿಗರೇಟು, ಬೀಡಿ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಒಂದೊಮ್ಮೆ ಇದನ್ನು ಉಲ್ಲಂಘಿಸಿದವರಿಗೆ ಜೀವನಪರ್ಯಂತ ಜೈಲು ಶಿಕ್ಷೆ ಅಥವಾ 95,910 ಡಾಲರ್ ವರೆಗೆ ದಂಡ ವಿಧಿಸಲಾಗುತ್ತದೆ. 2025 ರ ವೇಳೆಗೆ ಸಂಪೂರ್ಣವಾಗಿ ತಂಬಾಕು ಮುಕ್ತ ದೇಶವಾಗಲು ನ್ಯೂಜಿಲ್ಯಾಂಡ್ ಈ ತೀರ್ಮಾನ ಕೈಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...