alex Certify ಡೆಲ್ಟಾ ರೂಪಾಂತರಿಯ ತಡೆಗೆ ಈ ಕಠಿಣ ನಿರ್ಬಂಧ ಹೇರಿದೆ ನ್ಯೂಯಾರ್ಕ್ ಸಿಟಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲ್ಟಾ ರೂಪಾಂತರಿಯ ತಡೆಗೆ ಈ ಕಠಿಣ ನಿರ್ಬಂಧ ಹೇರಿದೆ ನ್ಯೂಯಾರ್ಕ್ ಸಿಟಿ…..!

ರೆಸ್ಟಾರೆಂಟ್​​ನಲ್ಲಿ ಖಾದ್ಯ ಸೇವನೆ ಮಾಡಬಯಸುವ, ಜಿಮ್​​ಗೆ ಹೋಗಲಿಚ್ಚಿಸುವ ಹಾಗೂ ಯಾವುದೇ ಪ್ರದರ್ಶನವನ್ನು ನೋಡಲು ಹೋಗುವವರಿಗೆ ನ್ಯೂಯಾರ್ಕ್​ನಲ್ಲಿ ಹೊಸ ಷರತ್ತನ್ನು ವಿಧಿಸಲಾಗಿದೆ. ಶೀಘ್ರದಲ್ಲೇ ಈ ನಿಯಮವು ಜಾರಿಗೆ ಬರಲಿದೆ. ಇದರನ್ವಯ ರೆಸ್ಟಾರೆಂಟ್​, ಜಿಮ್​​ ಹಾಗೂ ಯಾವುದೇ ಪ್ರದರ್ಶನವನ್ನು ನೋಡಲಿಚ್ಛಿಸುವವರಿಗೆ ಕೋವಿಡ್​ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸುವುದು ಕಡ್ಡಾಯವಾಗಿರಲಿದೆ. ಮೇಯರ್​ ಬಿಲ್​ ಡಿ ಬ್ಲಾಸಿಯೋ ಮಂಗಳವಾರ ಈ ನೂತನ ನಿಯಮದ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಮೂಲಕ ನ್ಯೂಯಾರ್ಕ್​ ಈ ರೀತಿಯ ನಿಯಮವನ್ನು ಜಾರಿಗೆ ತಂದ ಅಮೆರಿಕದ ಮೊದಲ ಬೃಹತ್​ ನಗರ ಎನಿಸಿದೆ.

BIG NEWS: ಹಿರಿಯ ನಾಯಕರಿಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್

ಆಗಸ್ಟ್​ ಹಾಗೂ ಸೆಪ್ಟೆಂಬರ್​​ನಲ್ಲಿ ಡೆಲ್ಟಾ ರೂಪಾಂತರಿಯ ಪ್ರಕರಣದಲ್ಲಿ ಏರಿಕೆಯಾಗೋದನ್ನು ತಡೆಯುವ ನಿಟ್ಟಿನಲ್ಲಿ ನ್ಯೂಯಾರ್ಕ್ ನಗರವು ಈ ಕಠಿಣ ನಿರ್ಧಾರ ಕೈಗೊಂಡಿದೆ. ನ್ಯೂಯಾರ್ಕ್ ನಗರದ ಜನತೆ ಕನಿಷ್ಟ ಒಂದು ಡೋಸ್​ ಲಸಿಕೆ ಪಡೆದ ಬಗ್ಗೆಯಾದರೂ ಪ್ರಮಾಣ ಪತ್ರವನ್ನು ತೋರಿಸೋದು ಕಡ್ಡಾಯವಾಗಲಿದೆ.

ನೀವೇನಾದರೂ ಡೆಲ್ಟಾ ರೂಪಾಂತರಿಯ ಆಕ್ರಮಣವನ್ನು ತಡೆಯಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯವಾಗಿದೆ. ಪ್ರತಿಯೊಬ್ಬರಿಗೂ ಇದೇ ಸರಿಯಾದ ಸಮಯ ಎಂದು ತಿಳಿಸುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮೇಯರ್​​ ಡಿ ಬ್ಲಾಸಿಯೋ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...