ರೆಸ್ಟಾರೆಂಟ್ನಲ್ಲಿ ಖಾದ್ಯ ಸೇವನೆ ಮಾಡಬಯಸುವ, ಜಿಮ್ಗೆ ಹೋಗಲಿಚ್ಚಿಸುವ ಹಾಗೂ ಯಾವುದೇ ಪ್ರದರ್ಶನವನ್ನು ನೋಡಲು ಹೋಗುವವರಿಗೆ ನ್ಯೂಯಾರ್ಕ್ನಲ್ಲಿ ಹೊಸ ಷರತ್ತನ್ನು ವಿಧಿಸಲಾಗಿದೆ. ಶೀಘ್ರದಲ್ಲೇ ಈ ನಿಯಮವು ಜಾರಿಗೆ ಬರಲಿದೆ. ಇದರನ್ವಯ ರೆಸ್ಟಾರೆಂಟ್, ಜಿಮ್ ಹಾಗೂ ಯಾವುದೇ ಪ್ರದರ್ಶನವನ್ನು ನೋಡಲಿಚ್ಛಿಸುವವರಿಗೆ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸುವುದು ಕಡ್ಡಾಯವಾಗಿರಲಿದೆ. ಮೇಯರ್ ಬಿಲ್ ಡಿ ಬ್ಲಾಸಿಯೋ ಮಂಗಳವಾರ ಈ ನೂತನ ನಿಯಮದ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಮೂಲಕ ನ್ಯೂಯಾರ್ಕ್ ಈ ರೀತಿಯ ನಿಯಮವನ್ನು ಜಾರಿಗೆ ತಂದ ಅಮೆರಿಕದ ಮೊದಲ ಬೃಹತ್ ನಗರ ಎನಿಸಿದೆ.
BIG NEWS: ಹಿರಿಯ ನಾಯಕರಿಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್
ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಡೆಲ್ಟಾ ರೂಪಾಂತರಿಯ ಪ್ರಕರಣದಲ್ಲಿ ಏರಿಕೆಯಾಗೋದನ್ನು ತಡೆಯುವ ನಿಟ್ಟಿನಲ್ಲಿ ನ್ಯೂಯಾರ್ಕ್ ನಗರವು ಈ ಕಠಿಣ ನಿರ್ಧಾರ ಕೈಗೊಂಡಿದೆ. ನ್ಯೂಯಾರ್ಕ್ ನಗರದ ಜನತೆ ಕನಿಷ್ಟ ಒಂದು ಡೋಸ್ ಲಸಿಕೆ ಪಡೆದ ಬಗ್ಗೆಯಾದರೂ ಪ್ರಮಾಣ ಪತ್ರವನ್ನು ತೋರಿಸೋದು ಕಡ್ಡಾಯವಾಗಲಿದೆ.
ನೀವೇನಾದರೂ ಡೆಲ್ಟಾ ರೂಪಾಂತರಿಯ ಆಕ್ರಮಣವನ್ನು ತಡೆಯಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯವಾಗಿದೆ. ಪ್ರತಿಯೊಬ್ಬರಿಗೂ ಇದೇ ಸರಿಯಾದ ಸಮಯ ಎಂದು ತಿಳಿಸುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮೇಯರ್ ಡಿ ಬ್ಲಾಸಿಯೋ ಹೇಳಿದ್ದಾರೆ.