ನ್ಯೂಯಾರ್ಕ್ ನ ವಾಷಿಂಗ್ಟನ್ ಸ್ಕ್ವೇರ್ ಪಾರ್ಕ್ ಬಳಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣದಲ್ಲಿ ಬಳಸುವ ಕ್ರೇನ್ ಮೇಲೆ ಹತ್ತಿ, ಉದ್ಯಾನದ ಆವರಣದಲ್ಲಿ ಭಾರೀ ಜನಸಮೂಹ ಜಮಾಯಿಸುತ್ತಿದ್ದಂತೆ ವಿವಸ್ತ್ರಗೊಂಡಿದ್ದಾನೆ.
ಅಪರಿಚಿತ ವ್ಯಕ್ತಿ ಅಲ್ಲಿದ್ದವರನ್ನು ಉದ್ದೇಶಿಸಿ “ನಿಮಗೆ ಇಂದು ಮನರಂಜನೆ ಇಲ್ಲವೇ?” ಎಂದು ಕೂಗಿದನು. “ನಿಮಗೆ ಮನರಂಜನೆ ಇಲ್ಲವೇ?’ ಎಂಬ ಸಾಲು ರಸ್ಸೆಲ್ ಕ್ರೋವ್ ಅವರ 2000ರಲ್ಲಿ ಬಿಡುಗಡೆಯಾದ ಚಲನಚಿತ್ರ “ಗ್ಲಾಡಿಯೇಟರ್’ ನಿಂದ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಆರ್ಚ್ ಪಕ್ಕದ ಕಾಂಡೋರ್ ಕ್ರೇನ್ ಅನ್ನು ಹತ್ತುವಾಗಲೇ ಆ ವ್ಯಕ್ತಿ ಶರ್ಟ್ಲೆಸ್ ಆಗಿದ್ದ. ಹಲವಾರು ಬಾರಿ ಆತ ನೆಗೆಯುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ವೀಕ್ಷಕರು ಅಂಚಿನಿಂದ ದೂರ ಹೋಗುವಂತೆ ಆತನನ್ನು ಕೇಳಿದ್ದಾರೆ.
ಅವನು ಜಿಗಿದರೆ ಅಥವಾ ಬಿದ್ದರೆ ರಕ್ಷಣೆಗಾಗಿ ದೊಡ್ಡ ಏರ್ಬ್ಯಾಗ್ ಅನ್ನು ಬಿಚ್ಚಲಾಗಿತ್ತು. ನಂತರ, ಆತನನ್ನು ಕೆಳಕ್ಕೆ ಇಳಿಸಲು ಕ್ರೇನ್ ಆಪರೇಟರ್ಗೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ, ಬಳಿಕ ಅವನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ಬಂಧಿಸಲಾಗಿದೆ. ಆದರೆ ನೂರಾರು ಜನರು ಇವನ ಹುಚ್ಚಾಟ ವೀಕ್ಷಿಸಲು ಜಮಾಯಿಸಿದ್ದರು.
ಈ ಸ್ಥಳದಲ್ಲಿ ಬಟ್ಟೆ ಬಿಚ್ಚಿಕೊಂಡ ಪ್ರಕರಣ ಇದೇ ಮೊದಲಲ್ಲ. 2020 ರ ಬೇಸಿಗೆಯಲ್ಲಿ, ವ್ಯಕ್ತಿಯೊಬ್ಬ ಬೆತ್ತಲೆಯಾಗಿದ್ದು, ಉದ್ಯಾನವನದ ಬರಿದಾದ ಕಾರಂಜಿಯಲ್ಲಿ ಕುಳಿತಿದ್ದ.