ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಸೂಟ್‌ಕೇಸ್‌ನಲ್ಲಿ ಸೇರಿಕೊಂಡಿದ್ದ ಜೀವಂತ ಬೆಕ್ಕಿನ ಮರಿ ಪತ್ತೆ ಮಾಡಿದ್ದಾರೆ.
ನವೆಂಬರ್ 16ರಂದು ಎಕ್ಸ್-ರೇ ಘಟಕದ ಮೂಲಕ ಬ್ಯಾಗ್ ಪರಿಶೀಲನೆ ನಡೆದಾಗ ಭದ್ರತಾ ಸಿಬ್ಬಂದಿ ಆಶ್ಚರ್ಯಚಕಿತರಾದರು. ಎಕ್ಸ್ ರೇ ನಲ್ಲಿ ಬ್ಯಾಗೇಜ್ ಒಳಗೆ ನಾಲ್ಕು ಕಾಲು, ಬಾಲದ ಪ್ರಾಣಿ ಕಾಣಿಸಿದೆ.
ಬಳಿಕ ಪರಿಶೀಲಿಸಿದ್ದು, ಬೆಕ್ಕು ಪತ್ತೆಯಾದ ನಂತರ ಪ್ರಯಾಣಿಕನು ಟಿಕೆಟ್ ಕೌಂಟರ್‌ಗೆ ಹಿಂತಿರುಗಲು ಸಂದೇಶ ಕಳುಹಿಸಲಾಯಿತು.
ಆ ಪ್ರಯಾಣಿಕ ಬೆಕ್ಕು ಬೇರೊಬ್ಬರಿಗೆ ಸೇರಿದೆ, ಬೆಕ್ಕು ಸೂಟ್ ಕೇಸ್ ನಲ್ಲಿದೆ ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಬಳಿಕ ಬೆಕ್ಕನ್ನು ಅದರ ಮಾಲೀಕರಿಗೆ ಹಿಂತಿರುಗಿಸಲಾಯಿತು. ವಿಮಾನ ನಿಲ್ದಾಣದ ಅಧಿಕಾರಿಗಳು ತಲುಪುವವರೆಗೂ ತನ್ನ ಟ್ಯಾಬಿ ಕಾಣೆಯಾಗಿರುವುದು ಬೆಕ್ಕಿನ ಮಾಲಕಿಗೂ ತಿಳಿದಿರಲಿಲ್ಲ