alex Certify ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 30 ನಿಮಿಷಕ್ಕಿಂತ ಅಧಿಕ ಸಮಯ ಕೆಲಸ ಮಾಡಿದ್ರೆ ಸಿಗಲಿದೆ ಹೆಚ್ಚುವರಿ ವೇತನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 30 ನಿಮಿಷಕ್ಕಿಂತ ಅಧಿಕ ಸಮಯ ಕೆಲಸ ಮಾಡಿದ್ರೆ ಸಿಗಲಿದೆ ಹೆಚ್ಚುವರಿ ವೇತನ

ಸರ್ಕಾರ, ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ ಕಾರ್ಮಿಕ ಕಾನೂನನ್ನು ಜಾರಿಗೆ ತರಲಿದೆ. ಇದನ್ನು ಜಾರಿಗೆ ತರುವ ಮೊದಲು ಸರ್ಕಾರ ಕೆಲ ನಿಯಮಗಳಲ್ಲಿ ತಿದ್ದುಪಡಿ ಮಾಡ್ತಿದೆ. ಏಪ್ರಿಲ್ 1 ರಿಂದಲೇ ಹೊಸ ಕಾನೂನು ಜಾರಿಗೆ ಬರಬೇಕಿತ್ತು. ಜುಲೈನಲ್ಲಿ ಜಾರಿಗೆ ಬರಲಿದೆ ಎನ್ನಲಾಗಿತ್ತು. ಆದ್ರೆ ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ.

ಅಕ್ಟೋಬರ್ 1 ರಿಂದ, ಸಂಬಳ ಪಡೆಯುವ ಉದ್ಯೋಗಿಗಳ ವೇತನ ರಚನೆಯಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು. ಉದ್ಯೋಗಿಗಳ ಟೇಕ್ ಹೋಮ್ ಸಂಬಳದಲ್ಲಿ ಇಳಿಕೆಯಾಗಲಿದೆ. ಹೊಸ ಕಾರ್ಮಿಕ ಸಂಹಿತೆಯಲ್ಲಿ ಕೆಲಸದ ಸಮಯ, ಅಧಿಕ ಸಮಯ, ವಿರಾಮದ ಸಮಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಲಾಗ್ತಿದೆ.

29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸುವ ಮೂಲಕ ಸರ್ಕಾರವು 4 ಹೊಸ ವೇತನ ಕಾನೂನನ್ನು ಸಿದ್ಧಪಡಿಸಿದೆ. ನಾಲ್ಕು ಕೋಡ್ ಗಳು ಏಕ ಕಾಲದಲ್ಲಿ ಅನ್ವಯವಾಗಲಿವೆ. ವೇತನ ಸಂಹಿತೆ ಕಾಯಿದೆ 2019 ರ ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ ಶೇಕಡಾ 50 ಕ್ಕಿಂತ ಕಡಿಮೆಯಿರಬಾರದು. ಅನೇಕ ಕಂಪನಿಗಳು ಮೂಲ ವೇತನವನ್ನು ಕಡಿಮೆ ನೀಡುತ್ತವೆ. ಭತ್ಯೆ ರೂಪದಲ್ಲಿ ಕಂಪನಿಗಳು ಹೆಚ್ಚಿನ ಹಣ ನೀಡುತ್ತವೆ.

ಹೊಸ ಕರಡು ಕಾನೂನಿನಲ್ಲಿ, ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚುವರಿ ಕೆಲಸ ಮಾಡಿದ್ರೂ ಅದನ್ನು 30 ನಿಮಿಷಗಳ ಕೆಲಸಕ್ಕೆ ಸೇರಿಸಲಾಗುತ್ತದೆ. ಅದಕ್ಕೆ ಹೆಚ್ಚಿನ ಸಂಬಳ ನೀಡಲಾಗುತ್ತದೆ. ಪ್ರಸ್ತುತ ನಿಯಮದ ಪ್ರಕಾರ, 30 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ಹೆಚ್ಚುವರಿ ಸಮಯಕ್ಕೆ ಅರ್ಹವೆಂದು ಪರಿಗಣಿಸಲಾಗುವುದಿಲ್ಲ. ಹೊಸ ಕಾನೂನಿನ ಪ್ರಕಾರ, ಉದ್ಯೋಗಿಯನ್ನು 5 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡುವಂತಿಲ್ಲ. ಪ್ರತಿ ಐದು ಗಂಟೆಗಳ ನಂತರ 30 ನಿಮಿಷಗಳ ವಿರಾಮವನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...