ಕೇಂದ್ರ ಸರ್ಕಾರ, 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಸಂಯೋಜಿಸುವ ಮೂಲಕ 4 ಹೊಸ ವೇತನ ಸಂಹಿತೆ ರಚನೆ ಮಾಡಿದೆ. ಈ ಸಂಹಿತೆ ಮತ್ತು ಕಾನೂನಿನ ಅನುಷ್ಠಾನದಿಂದ, ನೌಕರರ ಸಂಬಳ,ಇಪಿಎಫ್, ಪಿಂಚಣಿ ಮತ್ತು ಗ್ರಾಚ್ಯುಟಿ ಮೇಲೆ ಪರಿಣಾಮ ಬೀರಲಿದೆ. ನೌಕರರ ಸಂಬಳ, ಗಂಟೆಗಳು ಮತ್ತು ರಜಾದಿನಗಳಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ.
ಹೊಸ ನಿಯಮಗಳನ್ನು ಜಾರಿಗೆ ಬರಲು, ರಾಜ್ಯಗಳ ಒಪ್ಪಿಗೆ ಕೂಡ ಅಗತ್ಯವಿದೆ. ಈ ಕಾರಣದಿಂದ ಅನುಷ್ಠಾನ ವಿಳಂಬವಾಗಬಹುದು. ಆದಾಗ್ಯೂ, ಹೊಸ ವೇತನ ಕೋಡ್ ಜಾರಿಗೆ ಬರುವ ಮೊದಲು ಅದರ ಕರಡು ಸಾಲು ಮತ್ತು ಅಧಿಸೂಚನೆಯನ್ನು ನೀಡಲಾಗುವುದು.
ಕೋವಿಡ್ ಪ್ರಯಾಣ ನಿರ್ಬಂಧ; ಬ್ರಿಟನ್‌ಗೆ ಭಾರತದ ತಿರುಗೇಟು
ಕಾರ್ಮಿಕ ಸಂಘವು, ಪಿಎಫ್ ಮತ್ತು ವಾರ್ಷಿಕ ರಜೆಗಾಗಿ ಬೇಡಿಕೆ ಇಟ್ಟಿದೆ. ಗಳಿಸಿದ ರಜೆಯ ಮಿತಿಯನ್ನು 240 ದಿನಗಳಿಂದ 300 ದಿನಗಳಿಗೆ ಹೆಚ್ಚಿಸಲು ಸಂಸ್ಥೆ ಬಯಸುತ್ತದೆ. ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರ, ಬೀಡಿ ಕಾರ್ಮಿಕರು, ಪತ್ರಕರ್ತರು ಮತ್ತು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಿಗಳಿಗೆ ಪ್ರತ್ಯೇಕ ನಿಯಮಗಳನ್ನು ಮಾಡಬಹುದು ಎಂದು ಕಾರ್ಮಿಕ ಸಂಘದ ಅಧಿಕಾರಿಗಳು ಹೇಳಿದ್ದಾರೆ.
ನೌಕರರ ಭವಿಷ್ಯ ನಿಧಿ ಯೋಜನೆಯ ಅರ್ಹತೆಯನ್ನು 15,000 ರೂಪಾಯಿಯಿಂದ 25,000 ರೂಪಾಯಿಗೆ ಹೆಚ್ಚಿಸಬೇಕು ಎಂಬ ಬೇಡಿಕೆಯೂ ಇದೆ. ಕಾನೂನುಗಳ ಕುರಿತು ಅಂತಿಮ ಸುತ್ತಿನ ಚರ್ಚೆಗಳು ನಡೆಯುತ್ತಿವೆ.
ಈ ರಿಯಾಲಿಟಿ ಶೋನಲ್ಲಿ ಬಟ್ಟೆ ಇಲ್ಲದೆ 21 ದಿನ ಒಟ್ಟಿಗಿರಬೇಕು ಜೋಡಿಗಳು..!
ವೇತನ ಸಂಹಿತೆ ಕಾಯಿದೆಯ ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ಸಿಟಿಸಿ ವೆಚ್ಚದ ಶೇಕಡಾ 50ಕ್ಕಿಂತ ಕಡಿಮೆಯಿರಬಾರದು. ಪ್ರಸ್ತುತ, ಅನೇಕ ಕಂಪನಿಗಳು ಮೂಲ ವೇತನವನ್ನು ಕಡಿಮೆ ಮಾಡುತ್ತವೆ. ಹೆಚ್ಚುವರಿ ಭತ್ಯೆಗಳನ್ನೂ ನೀಡಿ, ಕಂಪನಿ ಮೇಲಿನ ಹೊರೆ ಕಡಿಮೆ ಮಾಡುತ್ತದೆ.
ತಜ್ಞರ ಪ್ರಕಾರ, ಮೂಲ ವೇತನ ಹೆಚ್ಚಳದ ಕಾರಣದಿಂದ ನೌಕರರ ಪಿಎಫ್ ಹೆಚ್ಚಾಗುತ್ತದೆ. ಕೈಗೆ ಸಿಗುವ ಸಂಬಳ ಕಡಿಮೆಯಾಗಬಹುದು. ಆದ್ರೆ ಭವಿಷ್ಯವು ಹೆಚ್ಚು ಸುರಕ್ಷಿತವಾಗಿರುತ್ತದೆ. ಇದು ನಿವೃತ್ತಿಯ ನಂತ್ರ ಹೆಚ್ಚು ಪ್ರಯೋಜನ ನೀಡಲಿದೆ.