ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಮಿಕರು, ಗಿರಣಿ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮುಂಬರುವ ಜುಲೈ ತಿಂಗಳಿನಿಂದ ದೊಡ್ಡ ಬದಲಾವಣೆಯಾಗಲಿದೆ. ಹೊಸ ವೇತನ ಸಂಹಿತೆಯ ಚರ್ಚೆ ಮತ್ತೊಮ್ಮೆ ಶುರುವಾಗಿದೆ. ಹೊಸ ವೇತನ ಸಂಹಿತೆ ಏಪ್ರಿಲ್ 1 ರಿಂದ ಜಾರಿಗೆ ತರಬೇಕಿತ್ತು. ಆದರೆ ಕಾರ್ಮಿಕ ಸಚಿವಾಲಯ ಅದನ್ನು ಮುಂದೂಡಿದೆ. ಜುಲೈನಿಂದ ಜಾರಿಗೆ ಬರಲಿದೆ ಎಂಬ ಸುದ್ದಿ ಬರ್ತಿದೆ.
ಉದ್ಯೋಗಿಗಳ ವೇತನದಲ್ಲಿ ಇದ್ರಿಂದ ದೊಡ್ಡ ಬದಲಾವಣೆಯಾಗಲಿದೆ. ನೌಕರರ ಟೇಕ್ ಹೋಮ್ ಸಂಬಳದಲ್ಲಿ ಇಳಿಕೆ ಕಂಡುಬರಬಹುದು. ಹೊಸ ಕಾರ್ಮಿಕ ಸಂಹಿತೆಯಲ್ಲಿ ಕೆಲಸದ ಸಮಯ, ವಿರಾಮದ ಸಮಯ ಮುಂತಾದವುಗಳ ಬಗ್ಗೆ ಸಹ ನಿಬಂಧನೆಗಳನ್ನು ಮಾಡಲಾಗಿದೆ.
ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ 4 ಹೊಸ ವೇತನ ಸಂಹಿತೆಗಳನ್ನು ಸಿದ್ಧಪಡಿಸಿದೆ. ಇವು ನಾಲ್ಕು ಸಂಕೇತಗಳಾಗಿವೆ. ಕೈಗಾರಿಕೆ ಸಂಬಂಧಗಳ ಸಂಹಿತೆ, ಔದ್ಯೋಗಿಕ ಸುರಕ್ಷತೆ ಕೋಡ್, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್, ಸಾಮಾಜಿಕ ಭದ್ರತಾ ಕೋಡ್ ಸೇರಿದೆ.
ವೇತನ ಸಂಹಿತೆ ಕಾಯ್ದೆ 2019 ರ ಪ್ರಕಾರ, ನೌಕರನ ಮೂಲ ವೇತನವು ಕಂಪನಿಯ ವೆಚ್ಚದ ಶೇಕಡಾ 50 ಕ್ಕಿಂತ ಕಡಿಮೆಯಿರಬಾರದು. ಸದ್ಯ ಅನೇಕ ಕಂಪನಿಗಳು ಮೂಲ ವೇತನವನ್ನು ಕಡಿಮೆ ನೀಡುತ್ತವೆ. ಹೆಚ್ಚಿನ ಭತ್ಯೆಗಳನ್ನು ನೀಡುವ ಮೂಲಕ ಕಂಪನಿ ಹೊರೆಯನ್ನು ಕಡಿಮೆ ಮಾಡುತ್ತವೆ.
ವೇತನ ಸಂಹಿತೆ ಕಾಯ್ದೆ 2019 ರ ಅನುಷ್ಠಾನದ ನಂತರ ನೌಕರರ ವೇತನದಲ್ಲಿ ಬದಲಾವಣೆ ಕಾಣಬಹುದು. ಟೇಕ್ ಹೋಮ್ ಸಂಬಳ ಕಡಿಮೆಯಾಗಲಿದೆ. ಪಿಎಫ್ ಹೆಚ್ಚಾಗಲಿದ್ದು, ಭವಿಷ್ಯ ಭದ್ರವಾಗಲಿದೆ. ಗ್ರ್ಯಾಚುಟಿ ಕೊಡುಗೆಯೂ ಹೆಚ್ಚುತ್ತದೆ. ಟೇಕ್ ಹೋಮ್ ಸಂಬಳ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಆದರೆ ನೌಕರನು ನಿವೃತ್ತಿಯ ನಂತರ ಹೆಚ್ಚಿನ ಮೊತ್ತವನ್ನು ಪಡೆಯುತ್ತಾನೆ.
ಹೊಸ ಕಾಯ್ದೆ ಜಾರಿಗೆ ಬಂದಲ್ಲಿ 5 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. 5 ಗಂಟೆ ಕೆಲಸದ ನಂತ್ರ 30 ನಿಮಿಷದವರೆಗೆ ವಿಶ್ರಾಂತಿ ನೀಡಬೇಕೆಂಬ ನಿಯಮವೂ ಇದೆ.