ಆರ್ಯನ್ ಬಂಧನದ ವೇಳೆ ಹಾಜರಿದ್ರಾ ಬಿಜೆಪಿ ನಾಯಕ..? ಶಾರೂಕ್ ಪುತ್ರನ ಡ್ರಗ್ಸ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ 07-10-2021 2:56PM IST / No Comments / Posted In: Featured News, Live News, Entertainment ಬಿಜೆಪಿ ನಾಯಕ ಹಾಗೂ ಖಾಸಗಿ ತನಿಖಾಧಿಕಾರಿ ಮುಂಬೈನ ಮಾದಕ ವಸ್ತು ನಿಗ್ರಹ ದಳ ಕಚೇರಿಗೆ ಪ್ರವೇಶಿಸಿ ಹೊರಬಂದ ವಿಡಿಯೋವನ್ನು ಎನ್ಸಿಪಿ ವಕ್ತಾರ ನವಾಬ್ ಮಲ್ಲಿಕ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರು ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾದ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನವಾಬ್ ಮಲ್ಲಿಕ್, ಎನ್ಸಿಬಿ ಕಚೇರಿ ಪ್ರವೇಶಿಸಿದ ಇಬ್ಬರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮನೀಷ್ ಭಾನುಶಾಲಿ ಹಾಗೂ ಖಾಸಗಿ ತನಿಖಾಧಿಕಾರಿ ಕೆ.ಪಿ. ಗೋಸಾವಿ ಎಂದು ಗುರುತಿಸಿದ್ದಾರೆ. ಎರಡೂ ವಿಡಿಯೋಗಳನ್ನು ಬಹಿರಂಗಪಡಿಸಿರುವ ನವಾಬ್ ಮಲ್ಲಿಕ್ ಈ ವಿಡಿಯೋಗಳನ್ನು ರಾತ್ರಿ ನಡೆದ ದಾಳಿಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ. ಭಾನುಶಾಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಜೊತೆ ಇರುವ ಫೋಟೋವನ್ನೂ ಮಲ್ಲಿಕ್ ಸುದ್ದಿಗೋಷ್ಠಿಯಲ್ಲಿ ತೋರಿಸಿದ್ದಾರೆ. ಎನ್ಸಿಬಿ ಕಚೇರಿಯಲ್ಲಿ ಆರ್ಯನ್ ಖಾನ್ ಜೊತೆ ಗೋಸಾವಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಗೋಸಾವಿ ನಮ್ಮ ಸಿಬ್ಬಂದಿಯಲ್ಲ ಎಂದು ಫೋಟೋ ವೈರಲ್ ಬಳಿಕ ಎನ್ಸಿಬಿ ಸ್ಪಷ್ಟನೆ ನೀಡಿತ್ತು. Here’s the video of Kiran P Gosavi and Manish Bhanushali entering the NCB office the same night the cruise ship was raided. pic.twitter.com/25yl9YsrSJ — Nawab Malik نواب ملک नवाब मलिक (@nawabmalikncp) October 6, 2021 Another video footage of Kiran P Gosavi and Manish Bhanushali leaving the NCB office. pic.twitter.com/9VxnSNgTxK — Nawab Malik نواب ملک नवाब मलिक (@nawabmalikncp) October 6, 2021