ಇತ್ತೀಚಿಗೆ ಜನರ ಬಳಿ ಒಂದಕ್ಕಿಂತ ಹೆಚ್ಚು ವಾಹನಗಳಿರುತ್ತವೆ. ಬೇರೆ ಬೇರೆ ಜಾಗಕ್ಕೆ ಹೋಗಲು ಬೇರೆ ಬೇರೆ ವಾಹನ ಬಳಸುವವರಿದ್ದಾರೆ. ಪ್ರತಿಯೊಂದು ವಾಹನದ ಜೊತೆ ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್, ಪಿಯುಸಿಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅನೇಕರು ತಮ್ಮ ವಾಹನದಲ್ಲಿ ಈ ದಾಖಲೆಗಳನ್ನು ಕಾಗದ ರೂಪದಲ್ಲಿ ಇಟ್ಟುಕೊಂಡಿರುತ್ತಾರೆ. ಅಪರೂಪಕ್ಕೆ ದಾಖಲೆ ಮರೆತಿದ್ದರೆ ಅಂದೇ ಪೊಲೀಸ್ ಕೈಗೆ ಸಿಕ್ಕಿಬೀಳಬೇಕಾಗುತ್ತದೆ. ಟ್ರಾಫಿಕ್ ಪೊಲೀಸರಿಗೆ ದಂಡ ನೀಡಬೇಕಾಗುತ್ತದೆ. ಆದ್ರೆ ಇನ್ಮುಂದೆ ವಾಹನದಲ್ಲಿ ದಾಖಲೆ ಇಟ್ಟುಕೊಂಡಿಲ್ಲ ಎಂಬ ಚಿಂತೆ ಬೇಡ. ಕೈನಲ್ಲಿ ಸ್ಮಾರ್ಟ್ಫೋನ್ ಇದ್ರೆ ನಿಮ್ಮ ಸಮಸ್ಯೆ ಮುಗಿದಂತೆ.
ಸ್ಮಾರ್ಟ್ಫೋನ್ ನಲ್ಲಿರುವ ಅಪ್ಲಿಕೇಶನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್, ಆರ್ ಸಿ, ಪಿಯುಸಿ ದಾಖಲೆಯನ್ನಿಟ್ಟುಕೊಳ್ಳಬಹುದು. ಅವಶ್ಯಕವಿದ್ದಾಗ ಸ್ಮಾರ್ಟ್ಫೋನ್ ತೆಗೆದು ದಾಖಲೆ ತೋರಿಸಿದ್ರೆ ಸಾಕಾಗುತ್ತದೆ. ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ Parivahan ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ಇದರ ಐಕಾನ್ ಕೆಂಪು ಬಣ್ಣದಲ್ಲಿರುತ್ತದೆ.
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಸೈನ್ ಅಪ್ ಮಾಡಬೇಕಾಗುತ್ತದೆ. ಇದಕ್ಕಾಗಿ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ಫೋನ್ ಸಂಖ್ಯೆಯೊಂದಿಗೆ ಲಾಗಿನ್ ಆದ ನಂತರ, ಮೊಬೈಲ್‌ಗೆ ಒಟಿಪಿ ಬರುತ್ತದೆ. ಇದರ ನಂತರ ಅಪ್ಲಿಕೇಶನ್‌ನ ಇಂಟರ್ಫೇಸ್ ತೆರೆಯುತ್ತದೆ. ಅದರ ನಂತರ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಪಿಯುಸಿ ಅಪ್‌ಲೋಡ್ ಮಾಡಬಹುದು. ದಾಖಲೆ ಕಾಗದವಿಲ್ಲದೆ ಚಾಲನೆ ಮಾಡುತ್ತಿದ್ದರೆ ಮತ್ತು ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ರೆ ಈ ಅಪ್ಲಿಕೇಶನ್ ತೆರೆದು, ದಾಖಲೆ ತೋರಿಸಬಹುದು.