alex Certify ʼಕ್ಯಾನ್ಸರ್‌ʼ ರೋಗವನ್ನು ಸಂಪೂರ್ಣ ನಿವಾರಿಸಲಿದೆ ಹೊಸ ತಂತ್ರಜ್ಞಾನ; ಮಾರಣಾಂತಿಕ ವೈರಸ್‌ ನಾಶಕ್ಕೆ ವಿಜ್ಞಾನಿಗಳ ಕೊಡುಗೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ಯಾನ್ಸರ್‌ʼ ರೋಗವನ್ನು ಸಂಪೂರ್ಣ ನಿವಾರಿಸಲಿದೆ ಹೊಸ ತಂತ್ರಜ್ಞಾನ; ಮಾರಣಾಂತಿಕ ವೈರಸ್‌ ನಾಶಕ್ಕೆ ವಿಜ್ಞಾನಿಗಳ ಕೊಡುಗೆ….!

ಕ್ಯಾನ್ಸರ್ ಒಂದು ಮಾರಕ ರೋಗ, ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಲೇ ಇದೆ. ತಂತ್ರಜ್ಞಾನ ಮತ್ತು ಔಷಧದ ಮೂಲಕ ಕ್ಯಾನ್ಸರ್‌ ಆರಂಭಿಕ ಹಂತದಲ್ಲಿದ್ದರೆ ಅದನ್ನು ಗುಣಪಡಿಸಬಹುದು. ಆದರೂ ಇದು ಬಹಳ ಅಪಾಯಕಾರಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಇದೀಗ ಕ್ಯಾನ್ಸರ್‌ ಅನ್ನು ಸಂಪೂರ್ಣ ಗುಣಪಡಿಸಬಲ್ಲ ಆಶಾದಾಯಕ ತಂತ್ರಜ್ಞಾನವೊಂದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ರೈಸ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರಜ್ಞ ಜೇಮ್ಸ್ ಟೂರ್ ಅವರು 99 ಪ್ರತಿಶತದಷ್ಟು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಈ ವಿಧಾನ ಸಂಪೂರ್ಣ ಯಶಸ್ವಿಯಾದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವೇ ಇರುವುದಿಲ್ಲ.

ಈ ತಂತ್ರಜ್ಞಾನಕ್ಕೆ ಮಾಲಿಕ್ಯುಲರ್ ಜಾಕ್‌ಹ್ಯಾಮರ್ ಎಂದು ಹೆಸರಿಸಲಾಗಿದೆ. ಮೂಳೆಗಳು ಮತ್ತು ಅಂಗಗಳಲ್ಲಿನ ಕ್ಯಾನ್ಸರ್ ಚಿಕಿತ್ಸೆಯನ್ನು ಇದು ಯಶಸ್ವಿಯಾಗಿಸುತ್ತದೆ ಎಂಬ ವಿಶ್ವಾಸವಿದೆ. ಕಲ್ಚರ್ಡ್ ಕ್ಯಾನ್ಸರ್ ಕೋಶಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ, ಆಣ್ವಿಕ ಜಾಕ್‌ಹ್ಯಾಮರ್ ವಿಧಾನವು ಜೀವಕೋಶಗಳನ್ನು ನಾಶಪಡಿಸುವಲ್ಲಿ 99 ಪ್ರತಿಶತದಷ್ಟು ಯಶಸ್ವಿಯಾಗಿದೆ. ಹೀಗಾಗಿ ಈ ಚಿಕಿತ್ಸೆ ಮೇಲಿನ ನಿರೀಕ್ಷೆಗಳು ಹೆಚ್ಚಿವೆ.

ಮೆಲನೋಮ ಗೆಡ್ಡೆಗಳೊಂದಿಗೆ ಇಲಿಗಳ ಮೇಲೆ ಪರೀಕ್ಷೆ !

ಮೆಲನೋಮಾ ಟ್ಯೂಮರ್ ಇರುವ ಇಲಿಗಳ ಮೇಲೆ ಪ್ರಯೋಗಾಲಯದಲ್ಲಿ ಇದನ್ನು ಪರೀಕ್ಷಿಸಲಾಗಿದೆ. ಈ ಚಿಕಿತ್ಸೆ ಬಳಿಕ ಅರ್ಧದಷ್ಟು ಇಲಿಗಳು ಕ್ಯಾನ್ಸರ್ ಮುಕ್ತವಾಗಿವೆ. ಅಮಿನೊಸೈನೈನ್ ಅಣುಗಳು ವಿಶಿಷ್ಟವಾದ ರಚನೆ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಸರಿಯಾದ ಪ್ರಚೋದಕಗಳೊಂದಿಗೆ ಸಂಯೋಜಿಸುತ್ತದೆ. ಈ ಅಣುಗಳು ಚಲಿಸುವಾಗ, ಅವುಗಳೊಳಗಿನ ಎಲೆಕ್ಟ್ರಾನ್‌ಗಳು ಪ್ಲಾಸ್ಮನ್‌ಗಳನ್ನು ರಚಿಸುತ್ತವೆ. ಆದಾಗ್ಯೂ ಈ ಸಂಶೋಧನೆ ಆರಂಭಿಕ ಹಂತದಲ್ಲಿದೆ. ಆದರೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಈ ಬಯೋಮೆಕಾನಿಕಲ್ ತಂತ್ರಜ್ಞಾನದ ಸಂಭಾವ್ಯ ಫಲಿತಾಂಶಗಳು ಸಕಾರಾತ್ಮಕವಾಗಿವೆ ಎಂಬುದು ಖಚಿತವಾಗಿದೆ.

ಇದರಲ್ಲಿ ಯಾಂತ್ರಿಕ ಚಟುವಟಿಕೆಯು ಹಿಂದೆ ಬಳಸಿದ ವಿಧಾನಕ್ಕಿಂತ ಒಂದು ಮಿಲಿಯನ್ ಪಟ್ಟು ವೇಗವಾಗಿರುತ್ತದೆ. ವಿಶೇಷವೆಂದರೆ ಈ ತಂತ್ರವು ಪ್ರಯೋಗಾಲಯದಲ್ಲಿ ಮಾನವ ಮೆಲನೋಮಾ ಕೋಶಗಳ ಮೇಲೆ 99 ಪ್ರತಿಶತದಷ್ಟು ಪರಿಣಾಮಕಾರಿ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಸದ್ಯ ಈ ಕುರಿತು ಮತ್ತಷ್ಟು ಪ್ರಯೋಗಗಳು ನಡೆಯುತ್ತಿವೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...