alex Certify ಭಾರೀ ಗಾತ್ರದ ಜೇಡದ ಚಿತ್ರ ಕಂಡು ಬೆಚ್ಚಿಬಿದ್ದ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಗಾತ್ರದ ಜೇಡದ ಚಿತ್ರ ಕಂಡು ಬೆಚ್ಚಿಬಿದ್ದ ನೆಟ್ಟಿಗರು…!

ಭಾರೀ ಗಾತ್ರದ ಅಪರೂಪದ ಜೇಡವೊಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಪತ್ತೆಯಾಗಿದೆ. ಕೇಂದ್ರ ಕ್ವೀನ್ಸ್‌ಲ್ಯಾಂಡ್‌ನ ಬ್ರಿಗಾಲೋ ಬೆಲ್ಟ್‌ನಲ್ಲಿ ಈ ಜೇಡ ಕಂಡುಬಂದಿದೆ.

’ಟ್ರ‍್ಯಾಪ್‌ಡೋರ್‌ ಸ್ಪೈಡರ್‌’ ಎಂದು ಇಂಗ್ಲಿಷ್‌ನಲ್ಲಿ ಕರೆಯಲ್ಪಡುವ ಈ ಜೇಡದ ವೈಜ್ಞಾನಿಕ ಹೆಸರು ’ಯೂಪೊಲಸ್ ಡಿಗ್ನಿಟಾಸ್’ ಆಗಿದೆ. ಈ ಜೇಡದ ಉದ್ದ 5 ಸೆಂಮೀ (2 ಇಂಚು) ಎಂದು ತಿಳಿದು ಬಂದಿದೆ. ಹೊಳೆಯುವ ಕೆಂಪು ಬಣ್ಣದ ಈ ಜೇಡವನ್ನು ನೋಡಿದರೆ ಭಯವಾಗುತ್ತದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಯೂಪೊಲಸ್ ಡಿಗ್ನಿಟಾಸ್ ಮರಗಳಿರುವ ಮುಕ್ತವಾದ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಕಪ್ಪು ಮಣ್ಣಿನಲ್ಲಿ ಇವು ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ದುರದೃಷ್ಟವಶಾತ್‌ ಮಾನವರಿಂದ ಭೂಪ್ರದೇಶದ ಕಬಳಿಕೆಯ ಕಾರಣದಿಂದ ಈ ಜೀವಿಗಳ ವಾಸಸ್ಥಾನಗಳು ಕಾಣೆಯಾಗಿವೆ ಎಂದು ಕ್ವೀನ್ಸ್‌ಲ್ಯಾಂಡ್ ಮ್ಯೂಸಿಯಮ್‌ ಫೇಸ್ಬುಕ್‌ನಲ್ಲಿರುವ ತನ್ನ ವಾಲ್‌ನಲ್ಲಿ ಜೇಡದ ಚಿತ್ರದೊಂದಿಗೆ ಅದರ ಪರಿಚಯವನ್ನು ಕೊಟ್ಟಿದೆ.

ಈ ಜೇಡದ ಹೆಣ್ಣು ಜೀವಿಗಳು ಗಂಡು ಜೀವಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿವೆ ಎಂದು ಈ ಜೀವಿಯ ಅನ್ವೇಷಣೆ ಮಾಡಿದ ಪ್ರಾಜೆಕ್ಟ್ ಡಿಐಜಿ ತಂಡ ತಿಳಿಸಿದೆ. ಗಂಡು ಜೇಡಗಳು ಪ್ರಕಾಶಮಾನವಾದ ಕೆಂಪು ಬಣ್ಣದ್ದಾಗಿದ್ದರೆ, ಹೆಣ್ಣು ಜೇಡಗಳು ಇನ್ನಷ್ಟು ಗಾಢವಾಗಿದ್ದು, ತೂಕವಾಗಿಯೂ ಇರುತ್ತವೆ. ಈ ಜೇಡಗಳು 5-7 ವರ್ಷಗಳ ಕಾಲ ಬದುಕುತ್ತವೆ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...