alex Certify ಇದೇನು ʼವಂಚನೆʼಯ ಹೊಸ ವಿಧಾನವಾ ? ಬೆಂಗಳೂರಿಗರು ಓದಲೇಬೇಕು ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇನು ʼವಂಚನೆʼಯ ಹೊಸ ವಿಧಾನವಾ ? ಬೆಂಗಳೂರಿಗರು ಓದಲೇಬೇಕು ಈ ಸುದ್ದಿ

ಬೆಂಗಳೂರಿನಲ್ಲಿ ಹೊಸ ರೀತಿಯ ವಂಚನೆ ಹಗರಣವನ್ನು ವ್ಯಕ್ತಿಯೊಬ್ಬರು ಬಹಿರಂಗಪಡಿಸಿದ್ದಾರೆ. ಲೇಖಕ, ಪ್ರಾಧ್ಯಾಪಕ ಮತ್ತು ತಕ್ಷಶಿಲಾ ಸಂಸ್ಥೆಯ ಉಪನಿರ್ದೇಶಕ ಪ್ರಣಯ್ ಕೋಟಸ್ತಾನೆ ಅವರು ಐಟಿ ಸಿಟಿ ಬೆಂಗಳೂರಲ್ಲಿ ಯಲ್ಲಿ ಎದುರಿಸಿದ ಭಯಾನಕ ಅನುಭವವನ್ನು ವಿವರಿಸಿದ್ದಾರೆ. ರಸ್ತೆಯಲ್ಲಿ ಇಂತಹ ಮೋಸಗಾರರ ಬಗ್ಗೆ ಎಚ್ಚರದಿಂದಿರಿ ಎಂದು ಅವರು ಬೆಂಗಳೂರಿನ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಿಡಿಗೇಡಿಯ ಕೃತ್ಯದ ಕುರಿತು ಟ್ವೀಟ್ ಮಾಡಿರುವ ಪ್ರಣಯ್, “ಭಾನುವಾರ (ಜುಲೈ 2) ಕ್ವೀನ್ಸ್ ರಸ್ತೆಯ ಸಿಗ್ನಲ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗಲು ನಾವು ಕಾಯುತ್ತಿದ್ದೆವು. ಗ್ರೀನ್ ಸಿಗ್ನಲ್ ಬಿದ್ದ ಬಳಿಕ ಅಲಯನ್ಸ್ ಫ್ರಾಂಚೈಸ್ ಕಡೆಗೆ ತಿರುಗಿದ ನಂತರ, ಆಕ್ಟಿವಾದಲ್ಲಿ ಒಬ್ಬ ವ್ಯಕ್ತಿ ನಮ್ಮನ್ನು ಆಕ್ರಮಣಕಾರಿಯಾಗಿ ನಿಲ್ಲಿಸಿದನು. ನಮ್ಮ ಕಾರು ಅವನ ಕಾಲಿನ ಮೇಲೆ ಚಲಿಸಿದೆ ಎಂದು ಆರೋಪಿಸಲು ಪ್ರಾರಂಭಿಸಿದನು. ನಾನು ಜಾಗರೂಕ ವ್ಯಕ್ತಿ, ನಿಧಾನ ಚಾಲಕನಾಗಿದ್ದರಿಂದ ನನಗೆ ಅವನ ಹೇಳಿಕೆಯಿಂದ ಆಶ್ಚರ್ಯವಾಯಿತು. ಅದರಲ್ಲೂ ನಮ್ಮ ಮುಂದಿದ್ದ ವಾಹನಗಳು ಚಲಿಸಿದ ನಂತರ ನಿಧಾನವಾಗಿ ಕಾರ್ ಚಲಾಯಿಸಿದ್ದೆ. ಆದರೂ ನಾನು ಅಚಾತುರ್ಯದಿಂದ ತಪ್ಪು ಮಾಡಿರಬಹುದು ಎಂದುಕೊಂಡು ಕ್ಷಮೆ ಕೇಳಿದೆ.” ಎಂದಿದ್ದಾರೆ.

ನಂತರ ಆರೋಪಿ ಆಕ್ರೋಶಗೊಂಡು ಕಾರಿನ ಕಿಟಕಿ ಬಡಿಯಲು ಆರಂಭಿಸಿದ. ಅವನು ಹೆಚ್ಚು ಆಕ್ರಮಣಕಾರಿಯಾಗಿ ಕೂಗಲು ಪ್ರಾರಂಭಿಸಿದನು. ನಾನು ಕಾರಿನಿಂದ ಇಳಿದು ಅವನನ್ನು ಎದುರಿಸಬೇಕೆಂದು ಅವನು ಬಯಸಿದ್ದನು. ಆದರೆ ನಾನು ನನ್ನ ಶಾಂತತೆಯನ್ನು ಕಾಪಾಡಿಕೊಂಡೆ ಮತ್ತು ಮುಂದೆ ಹೋದೆ. ಸ್ವಲ್ಪ ದೂರದ ನಂತರ ನಾನು ನನ್ನ ಮಾರ್ಗ ಹಿಡಿದರೆ ಆತ ಮತ್ತೊಂದು ಮಾರ್ಗದಲ್ಲಿ ಹೋದರು ಎಂದು ತಿಳಿಸಿದ್ದಾರೆ.

ಆದರೆ ಈ ಘಟನೆ ನಡೆದ ಎರಡು ದಿನಗಳ ನಂತರ ಪ್ರಣಯ್ ಅದೇ ವ್ಯಕ್ತಿಯನ್ನು ಮತ್ತೆ ಎದುರಿಸಿದ್ದಾರೆ. ಜುಲೈ 4 ರಂದು (ಮಂಗಳವಾರ) ಸಂಜೆ 5.30 ರ ಸುಮಾರಿಗೆ ನನಗೆ ಅದೇ ರೀತಿ ಸಂಭವಿಸಿತು. ಈ ಬಾರಿ ಥಾಮ್ಸ್ ಬೇಕರಿ ಬಳಿಯ ವೀಲರ್ ರಸ್ತೆಯಲ್ಲಿ ಮತ್ತೆ ಅದೇ ವ್ಯಕ್ತಿ ಎದುರಾದ. ಅವನು ಮತ್ತೊಂದು ದ್ವಿಚಕ್ರ ವಾಹನದಲ್ಲಿ ಅವನ ಸಹಚರನಿಗೆ ಅದೇ ತಂತ್ರವನ್ನು ಪ್ರಯತ್ನಿಸಲು ಅವಕಾಶ ಮಾಡಿಕೊಟ್ಟನು. ಆತ ನನ್ನ ಕಾರಿನ ಗಾಜುಗಳನ್ನು ಬಡಿಯಲು ಪ್ರಾರಂಭಿಸಿದನು ಮತ್ತು ಅದೇ ಆರೋಪವನ್ನು ಮಾಡಿದನು. ಇದು ವಂಚನೆ ಎಂದು ಈ ಬಾರಿ ನನಗೆ ಖಚಿತವಾಯಿತು. ಅದೃಷ್ಟವಶಾತ್ ಹತ್ತಿರದಲ್ಲಿ ಕೆಲವು ಟ್ರಾಫಿಕ್ ಪೊಲೀಸರು ಇದ್ದರು ಎಂದು ಪ್ರಣಯ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಐಟಿ ರಾಜಧಾನಿಯಲ್ಲಿ ಇಂತಹ ವಂಚನೆಗಳು ಹೆಚ್ಚುತ್ತಿರುವ ಕಾರಣ ಪೊಲೀಸರು ದೂರು ದಾಖಲಿಸಲು ತಿಳಿಸಿದ್ದಾರೆ. ರಸ್ತೆಗಳಲ್ಲಿ ಇದೇ ರೀತಿಯದ್ದನ್ನು ನೀವು ಗಮನಿಸಿದರೆ ಹತ್ತಿರದ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿ, ಬದಲಾಗಿ ಜಗಳಕ್ಕೆ ಇಳಿಯಬೇಡಿ ಎಂದು ಪ್ರಣಯ್ ಸಲಹೆ ನೀಡಿದ್ದಾರೆ.

— Pranay Kotasthane (@pranaykotas) July 9, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...