alex Certify ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿ ಬಳಿಕ ಗ್ರ್ಯಾಚುಟಿಯ ಹೊಸ ಲೆಕ್ಕಾಚಾರ ಘೋಷಿಸಿದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿ ಬಳಿಕ ಗ್ರ್ಯಾಚುಟಿಯ ಹೊಸ ಲೆಕ್ಕಾಚಾರ ಘೋಷಿಸಿದ ಸರ್ಕಾರ

ಕನಿಷ್ಠ 5 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಕೇಂದ್ರ ಸರ್ಕಾರಿ ನೌಕರರು ಮಾತ್ರವೇ ನಿವೃತ್ತಿ ಗ್ರ್ಯಾಚುಟಿ ಪಡೆಯಲು ಅರ್ಹರಾಗುತ್ತಾರೆ. ಆದರೆ, ಸೂಪರ್‌ ಆನುಯೇಷನ್‌ ಅವಧಿಗೆ ನೌಕರ ನಿವೃತ್ತಿ ಹೊಂದಬೇಕಾಗುತ್ತದೆ. ಕೇವಲ ರಾಷ್ಟ್ರಪತಿಗೆ ಮಾತ್ರವೇ ಗ್ರ್ಯಾಚುಟಿ ತಡೆಹಿಡಿಯುವ ಪೂರ್ಣ ಅಧಿಕಾರ ನೀಡಲಾಗಿದೆ ಎನ್ನುವುದು ಹಲವರಿಗೆ ತಿಳಿದೇ ಇರುವ ಸಂಗತಿಗಳಾಗಿವೆ.

ಆದರೆ, ಗ್ರ್ಯಾಚುಟಿ ಲೆಕ್ಕಾಚಾರದ ಬಗ್ಗೆ ನೌಕರರಿಗೆ ತಿಳಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು, ಕೆಲವು ಮಾಹಿತಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ, ಕೆಲಸದಲ್ಲಿ ಕನಿಷ್ಠ 6 ತಿಂಗಳು ಪೂರ್ಣ ಮಾಡಿದಾಗ ಪಡೆಯುವ ಒಟ್ಟಾರೆ ಸೇವಾಧನ ಅಥವಾ ಗೌರವಧನದ ನಾಲ್ಕರಲ್ಲಿ ಒಂದು ಪಾಲು ಮೊತ್ತವನ್ನು ಗ್ರ್ಯಾಚುಟಿ ಎಂದು ಪರಿಗಣಿಸಲಾಗುತ್ತದೆ. ಗರಿಷ್ಠ 16.5 ಪಟ್ಟು ಮೊತ್ತವನ್ನು ಗ್ರ್ಯಾಚುಟಿ ಎಂದು ಘೋಷಿಸಬಹುದಾಗಿದೆ.

ಹುಡುಗಿಯ ಪವರ್‌ ಫುಲ್‌ ಡಾನ್ಸ್‌ ಗೆ ಮೂಕವಿಸ್ಮಿತರಾದ ನೆಟ್ಟಿಗರು

ಇಲ್ಲಿ ಒಟ್ಟಾರೆ ಸೇವಾ ಧನ ಅಥವಾ ಗೌರವ ಧನ ಎಂದರೆ, ನೌಕರ ಪಡೆಯುವ ಮೂಲವೇತನ ಮಾತ್ರವೇ ಆಗಿದೆ. ಅಂದರೆ ಸಾಯುವ ಮುನ್ನಾ ದಿನ ಅಥವಾ ನಿವೃತ್ತಿಯ ದಿನದವರೆಗೆ ಕೇಂದ್ರ ಸರ್ಕಾರಿ ನೌಕರನೊಬ್ಬ ಪಡೆಯುತ್ತಿದ್ದ ವೇತನದಲ್ಲಿನ ಮೂಲವೇತನ ಮೊತ್ತ. ಒಂದು ವೇಳೆ ನೌಕರ ವೈದ್ಯನಾಗಿ ಕಾರ್ಯನಿರ್ವಹಿಸಿದ್ದರೆ ಮಾತ್ರವೇ, ಭತ್ಯೆಯನ್ನು ಕೂಡ ಮೂಲವೇತನಕ್ಕೆ ಸೇರಿಸಲಾಗುತ್ತದೆ.

ನಾಗರಿಕ ಸರ್ಕಾರಿ ಸೇವೆಗಳ ಉದ್ಯೋಗಿಗಳಿಗೂ ಸೇರಿದಂತೆ ಹೊಸ ಗ್ರ್ಯಾಚುಟಿ ಲೆಕ್ಕಾಚಾರವು ಅನ್ವಯವಾಗಲಿದೆ. ಒಟ್ಟಿನಲ್ಲಿ 2004ರ ಜನವರಿ ಮೊದಲ ದಿನದಿಂದ ಅಥವಾ ನಂತರ ಕೇಂದ್ರ ಸರಕಾರಿ ಹಾಗೂ ರಕ್ಷಣಾ ಸೇವೆಗಳ ಉದ್ಯೋಗಕ್ಕೆ ಹಾಜರಾದವರಿಗೆ ಹೊಸ ಲೆಕ್ಕಾಚಾರದ ಅಡಿಯಲ್ಲೇ ಗ್ರ್ಯಾಚುಟಿ ಸಿಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...