ನವದೆಹಲಿ: ಇತ್ತೀಚೆಗೆ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು ಪಿಎಫ್ ಮೇಲೆ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಏಪ್ರಿಲ್ 1 ರಿಂದ ಹೊಸ ತೆರಿಗೆ ಪದ್ಧತಿ ಜಾರಿಗೆ ಬರಲಿದ್ದು, ಅದರ ಬಗ್ಗೆ ಇಲ್ಲಿದೆ ಕೆಲ ಮಾಹಿತಿ.
ಪಿಎಫ್ ಗೆ ವಾರ್ಷಿಕವಾಗಿ 2.5 ಲಕ್ಷಕ್ಕಿಂತ ಹೆಚ್ಚು ನೌಕರನ ಪಾಲನ್ನು ಪಾವತಿಸುವವರಿಗೆ ಮಾತ್ರ ಈ ತೆರಿಗೆ ಅನ್ವಯವಾಗಲಿದೆ. ಅದಕ್ಕಿಂತ ಕಡಿಮೆ ಪಾವತಿಸುವವರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಈ ಹಿಂದಿನಂತೆ ಆದಾಯ ತೆರಿಗೆ ವಿನಾಯಿತಿಗೂ ಒಳಪಡಲಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ: ಹಣ, ಆಸ್ತಿಗಾಗಿ ಕುಟುಂಬದವರಿಂದಲೇ ಘೋರ ಕೃತ್ಯ
ಸದ್ಯ ಪ್ರತಿ ನೌಕರನ ಮೂಲ ವೇತನದಲ್ಲಿ ಶೇ.12 ರಷ್ಟನ್ನು ಪಿಎಫ್ ಗೆ ನೀಡಬೇಕು. ಉದ್ಯೋಗದಾತ ಸಂಸ್ಥೆ ಶೇ.12 ರಷ್ಟು ಕೊಡುಗೆಯನ್ನು ಪಿಎಫ್ ಗೆ ಹಾಕುತ್ತದೆ. ಪಿಎಫ್ ಡಿಫಾಸಿಟ್ ಗೆ ಶೇ.8 ರಷ್ಟು ಬಡ್ಡಿ ನೀಡಲಾಗುತ್ತದೆ. ಹೆಚ್ಚಿನ ಆದಾಯ ಇರುವವರಿಗೆ ಈ ಸೌಲಭ್ಯ ಕಡಿತ ಮಾಡಲು ಸರ್ಕಾರ ಮುಂದಾಗಿದೆ.
ಹೆಚ್ಚಿನ ವೇತನ ಇರುವವರನ್ನು ಬಿಟ್ಟು, ಪಿಎಫ್ ಮೇಲೆ ಮೂಲ ವೇತನದ ಶೇ.12 ಕ್ಕಿಂತ ಜಾಸ್ತಿ ಹೂಡಿಕೆ ಮಾಡುವ ವಾಲೆಂಟರಿ ಪ್ರಾವಿಡೆಂಡ್ ಫಂಡ್ ಹೂಡಿಕೆದಾರರಿಗೂ ತೆರಿಗೆ ಬೀಳಲಿದೆ. ಆದರೆ, ಎಷ್ಟು ತೆರಿಗೆ ವಿಧಿಸಲಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.