ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಸರ್ಕಾರಿ ನೇಮಿತ ಸಲಹಾ ಸಂಸ್ಥೆಯಾದ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘವು ಪಿಎನ್ಜಿ ಗ್ರಾಹಕರಿಗೆಂದೇ ಹೊಸ ಗ್ಯಾಸ್ ಸ್ಟೌ ಅಭಿವೃದ್ಧಿಪಡಿಸಿದೆ. ಈ ಹೊಸ ಗ್ಯಾಸ್ ಸ್ಟೌ ಅನಿಲದ ಬಳಕೆಯನ್ನ ಕಡಿಮೆ ಮಾಡಲಿದ್ದು, ಇದರಿಂದಾಗಿ ಹಣವೂ ಉಳಿತಾಯವಾಗಲಿದೆ.
ಎನರ್ಜಿ ಎಫಿಷಿಯೆನ್ಸಿ ಸರ್ವೀಸ್ ಲಿಮಿಟೆಡ್ ಜೊತೆಯಲ್ಲಿ ತಿಳುವಳಿಕೆ ಒಪ್ಪಂದಕ್ಕೆ ಪಿಸಿಆರ್ಎ ಸಹಿಯನ್ನ ಹಾಕಿದೆ. ಕುಕ್ ಸ್ಟೌ ಯೋಜನೆಯ ಮೊದಲ ಹಂತದಲ್ಲಿ ದೇಶಾದ್ಯಂತ ಇಇಎಸ್ಎಲ್ 10 ಲಕ್ಷ ಗ್ಯಾಸ್ ಸ್ಟೌಗಳನ್ನ ವಿತರಣೆ ಮಾಡಲಿದೆ.
ಈ ಹೊಸ ಗ್ಯಾಸ್ ಸ್ಟೌಗಳು ಗ್ರಾಹಕರಿಗೆ ಅಗ್ಗದ ದರದಲ್ಲಿಯೇ ಸಿಗಲಿದೆ ಎಂದು ಪಿಸಿಆರ್ಎ ಗ್ಯಾರಂಟಿ ನೀಡಿದೆ. ಎಲ್ಪಿಜಿ ಸಿಲಿಂಡರ್ಗಳ ಸಹಾಯದಿಂದ ಗ್ರಾಹಕರು ಇನ್ಮೇಲೆ ಈ ಹೊಸ ಸ್ಟೌಗಳನ್ನ ಬಳಕೆ ಮಾಡಬಹುದಾಗಿದೆ.
ಈ ಹೊಸ ಸ್ಟೌನಿಂದಾಗಿ ಎಲ್ಪಿಜಿ ಬಳಕೆಯನ್ನ 40 ಪ್ರತಿಶತ ಕಡಿಮೆ ಮಾಡುವ ಸಾಮರ್ಥ್ಯವನ್ನ ಹೊಂದಿದೆ. ಉಷ್ಣ ದಕ್ಷತೆಯ ಪ್ರಮಾಣ ಕಡಿಮೆಯಾಗೋದ್ರಿಂದ ಅನಿಲವು ಸ್ಟೌನಲ್ಲಿಯೇ ಹೆಚ್ಚು ಬಳಕೆಯಾಗಲಿದೆ. ಅಲ್ಲದೇ ಈ ಹೊಸ ಸ್ಟೌಗಳಿಗೆ ಐಎಸ್ಐ ಮುದ್ರೆ ಕೂಡ ದಕ್ಕಿದೆ.
ಎಲ್ಲಾ ಎಲ್ಪಿಜಿ ಗ್ರಾಹಕರು ತಮ್ಮ ಮನೆಯಲ್ಲಿರುವ ಸಾಮಾನ್ಯ ಗ್ಯಾಸ್ ಸ್ಟೌಗಳನ್ನ ಬದಿಕ್ಕೊತ್ತಿ ಈ ಹೊಸ ಒಲೆಯನ್ನ ಮನೆಗೆ ಕೊಂಡೊಯ್ಯೋದ್ರಿಂದ 3901 ಕೋಟಿ ರೂಪಾಯಿ ಮೌಲ್ಯದ ನೈಸರ್ಗಿಕ ಅನಿಲ ಬಳಕೆಯನ್ನ ಉಳಿತಾಯ ಮಾಡಬಹುದಾಗಿದೆ ಎಂದು ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘ ಮಾಹಿತಿ ನೀಡಿದೆ. ಇದು ಮಾತ್ರವಲ್ಲದೇ ಪರಿಸರಕ್ಕೆ ಹೊರಸೂಸಲಾಗುತ್ತಿದ್ದ ಕಾರ್ಬನ್ ಡೈಯಾಕ್ಸೈಡ್ ಪ್ರಮಾಣ 11 ಮಿಲಿಯನ್ ಟನ್ನಷ್ಟು ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.