ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ದೆಹಲಿಯಲ್ಲಿನ ಸಂಸತ್ ಭವನವನ್ನು ಪುನರ್‌ಅಭಿವೃದ್ಧಿ ಯೋಜನೆ ಅಡಿಯಲ್ಲಿ ವಿಸ್ತರಿಸಲಾಗುತ್ತಿದೆ. ‘ಸೆಂಟ್ರಲ್ ವಿಸ್ತಾ ‘ ಎಂದು ಈ ಯೋಜನೆಗೆ ಹೆಸರಿಡಲಾಗಿದ್ದು, ಸುಮಾರು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಹಳೆಯ ಸಂಸತ್ ಭವನವನ್ನು ಕೆಡವಲಾಗುತ್ತಿಲ್ಲ. ಅದನ್ನು ಕಾಪಾಡಿಕೊಂಡು, ವಿಶೇಷ ವಿನ್ಯಾಸ ಕಟ್ಟಡವು ತಲೆ ಎತ್ತುತ್ತಿದೆ.
ಈ ಹೊಸ ಕಟ್ಟಡ ವಿನ್ಯಾಸದ ಹೊಣೆಯನ್ನು ಖ್ಯಾತ ವಾಸ್ತುಶಿಲ್ಪ ಶಾಸ್ತ್ರಜ್ಞರಾದ ಬಿಮಲ್ ಪಟೇಲ್ ಅವರಿಗೆ ವಹಿಸಲಾಗಿದೆ. ಟಿವಿ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ’’ಕೆಲವೇ ಜನರು ಮಾತ್ರವೇ ಕಚೇರಿ ಹೊಂದಲು ಅವಕಾಶವಿದ್ದ ಸಣ್ಣ ಗಾತ್ರದ ಪರಿಷತ್ ಭವನವನ್ನು ಸಂಸತ್ ಭವನ ಎಂದು ಇದುವರೆಗೂ ಕರೆಯಲಾಗುತ್ತಿತ್ತು. ಆದರೆ ಸೆಂಟ್ರಲ್ ವಿಸ್ತಾ ಯೋಜನೆ ಅಡಿಯಲ್ಲಿ ಪ್ರಧಾನಿ ನಿವಾಸ, ಉಪರಾಷ್ಟ್ರಪತಿ ಅವರ ಸಂಕೀರ್ಣ, ರಾಜಪಥವು ಆಧುನೀಕರಣಗೊಂಡು ಅದರ ಜತೆಗೆ ಹೊಸದಾಗಿ ಒಂಭತ್ತು ಕಟ್ಟಡಗಳು (ಸಂಸದರ ಭವನ, ಪ್ರಮುಖ ಕೇಂದ್ರ ಇಲಾಖೆ ಕಚೇರಿಗಳು, ಇತರೆ) ಕೂಡ ತಲೆಎತ್ತಲಿವೆ. ಹಾಗಾಗಿ ವಿಸ್ತಾವನ್ನೇ ನೈಜ ಸಂಸತ್ ಭವನ ಎಂದು ಹೆಮ್ಮೆಯಿಂದ ಹೇಳುವಂತಾಗಲಿದೆ,’’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಪ್ಪಾಯ ತಿನ್ನುವ ಮೊದಲು ನಿಮಗೆ ತಿಳಿದಿರಲಿ ಈ ವಿಷಯ
ಪ್ರಸ್ತುತ ಇರುವ ಲೋಕಸಭೆಯು ಕೇವಲ 150 ಸಂಸದರಿಗಾಗಿ ಮಾತ್ರವೇ ಹಿಂದಿನ ಕಾಲದಲ್ಲಿ ವಿನ್ಯಾಸ ಮಾಡಲಾಗಿತ್ತು. ಆದರೆ ಸದ್ಯ, ದೇಶದಲ್ಲಿ 500ಕ್ಕೂ ಹೆಚ್ಚು ಸಂಸದರು ಚುನಾಯಿತರಾಗಿ ಬರುತ್ತಾರೆ.
ಉದ್ಯೋಗಾಕಾಂಕ್ಷಿಗಳೇ ಗಮನಿಸಿ: SBI ನ 2000 ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯುಪಿಎ ಸರ್ಕಾರದ ಅವಧಿಯಲ್ಲೇ , ಲೋಕಸಭಾ ಸ್ಪೀಕರ್ ಅವರು ನಗರಾಡಳಿತ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಹೊಸ ಸಂಸತ್ ಕಟ್ಟಡ ನಿರ್ಮಾಣದ ಯೋಜನೆ ರೂಪಿಸಲು ಸೂಚಿಸಿದ್ದರು ಎಂದು ಪಟೇಲ್ ತಿಳಿಸಿದ್ದಾರೆ. ಅವರ ಮಾತಿಗೆ ಕಾರ್ಯಕ್ರಮದಲ್ಲೇ ಇದ್ದ ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.