alex Certify ಭಾರತದೊಂದಿಗೆ ವಿಶ್ವದ ಪ್ರಗತಿಗೆ ನೂತನ ಸಂಸತ್ ಕೊಡುಗೆ: ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದೊಂದಿಗೆ ವಿಶ್ವದ ಪ್ರಗತಿಗೆ ನೂತನ ಸಂಸತ್ ಕೊಡುಗೆ: ಪ್ರಧಾನಿ ಮೋದಿ

ನವದೆಹಲಿ: ಬಸವೇಶ್ವರರ ಅನುಭವ ಮಂಟಪ ನಮಗೆಲ್ಲ ಪ್ರೇರಣೆಯಾಗಿದೆ. ಈ ಸೆಂಗೋಲ್ ನಮಗೆಲ್ಲರಿಗೂ ಪ್ರೇರಣೆ ನೀಡುತ್ತಾ ಇರುತ್ತದೆ. ಗುಲಾಮಿ ಪರಿಸ್ಥಿತಿಯಿಂದ ಎಲ್ಲಾ ಮುಕ್ತಿ ಹೊಂದಿದ್ದೇವೆ. ಇಂದಿನಿಂದ ಹೊಸ ಯಾತ್ರೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದ್ದಾರೆ.

ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಕನಸುಗಳನ್ನು ಈಡೇರಿಸುವ ಅಮೃತಕಾಲ ಇದಾಗಿದೆ. ರಾಜಸ್ಥಾನದಿಂದ ತಂದಿರುವ ಗ್ರಾನೆಟ್ ಬಳಕೆ ಮಾಡಲಾಗಿದೆ. ಮಹಾರಾಷ್ಟ್ರಗಳ ಮರಗಳನ್ನು ಬಳಸಲಾಗಿದೆ. ಉತ್ತರ ಪ್ರದೇಶದಿಂದಿರ ತಂದಿರುವ ನೆಲಹಾಸು ಬಳಕೆ ಮಾಡಲಾಗಿದೆ. ನೂತನ ಸಂಸತ್ತಿನಿಂದ ಭಾರತ ಜನ ಗೌರವ ಹೆಚ್ಚಾಗುತ್ತದೆ. ನೂತನ ಸಂಸತ್ತು ಸಂಸ್ಕೃತಿ, ಕಲೆ, ಕೌಶಲ್ಯವನ್ನು ಸಾರುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವವೇ ಪ್ರೇರಣೆ, ಸಂವಿಧಾನವೇ ಸಂಕಲ್ಪ. ಈ ಸಂಸತ್ ಭವನ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ, ಹೊಸ ಸಂಕಲ್ಪ ಹೊಸ ವಿಶ್ವಾಸ ಮೂಡಿದ ದಿನವಿದು. ಹಳೆ ಕಟ್ಟಡದಲ್ಲಿ ಕೆಲಸ ತಂತ್ರಜ್ಞಾನ ಸೇರಿ ಹಲವು ಸಮಸ್ಯೆ ಇತ್ತು. ಹೊಸ ಸಂಸತ್ ಭವನವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದೆ. ಇದನ್ನು ನೋಡಿದ ಮೇಲೆ ಖುಷಿಯಾಗುತ್ತಿದೆ. ಇಲ್ಲಿ ಡಿಜಿಟಲ್ ಗ್ಯಾಲರಿ ಇದೆ. ಹೊಸ ಸಂಸತ್ತಿನ ಕಟ್ಟಡವು ಭಾರತದೊಂದಿಗೆ ವಿಶ್ವದ ಪ್ರಗತಿಗೆ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...