alex Certify ಭಾರತದಲ್ಲಿ ಲಾಂಚ್‌ ಆದ 2023 ರ ಹುಂಡೈ ವರ್ನಾ; ಇಲ್ಲಿದೆ ಬೆಲೆ ಸೇರಿದಂತೆ ಇನ್ನಿತರೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಲಾಂಚ್‌ ಆದ 2023 ರ ಹುಂಡೈ ವರ್ನಾ; ಇಲ್ಲಿದೆ ಬೆಲೆ ಸೇರಿದಂತೆ ಇನ್ನಿತರೆ ವಿವರ

ತನ್ನ ಜನಪ್ರಿಯ ಕಾರು ವರ್ನಾದ 2023ರ ಅವತರಣಿಕೆ ಬಿಡುಗಡೆ ಮಾಡಿರುವ ಹುಂಡೈ ಇಂಡಿಯಾ, ವಾಹನದ ಆರಂಭಿಕ ಬೆಲೆಯನ್ನು 10.90 ಲಕ್ಷ (ಎಕ್ಸ್ ಶೋ ರೂಂ, ನವ ದೆಹಲಿ) ಎಂದು ನಿಗದಿಪಡಿಸಿದೆ. 2023 ವರ್ನಾ EX, S, SX ಮತ್ತು SX(O) ಎಂಬ ನಾಲ್ಕು ಅವತಾರಗಳಲ್ಲಿ ಬರಲಿದೆ. ಈ ಕಾರುಗಳನ್ನು ಚೆನ್ನೈನಲ್ಲಿರುವ ಹುಂಡೈನ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು ಹಾಗೂ ವಿದೇಶಗಳಿಗೂ ರಫ್ತು ಮಾಡಲಾಗುವುದು.

2023 ವರ್ನಾದ ಮುಂಗಡ ಬುಕಿಂಗ್ ಗವಾಕ್ಷಿಯನ್ನು ತಿಂಗಳ ಮುನ್ನವೇ ಆರಂಭಿಸಲಾಗಿದ್ದು, ಹುಂಡೈ ಡೀಲರ್‌ಶಿಪ್‌ಗಳಲ್ಲಿ 25,000 ರೂ. ಟೋಕನ್ ಮೊತ್ತ ಪಾವತಿ ಮಾಡಿ ಬುಕಿಂಗ್ ಮಾಡಬಹುದಾಗಿದೆ.

ಏಳು ಸಿಂಗಲ್ ಟೋನ್ ಮತ್ತು ಎರಡು ಡ್ಯುಯಲ್ ಟೋನ್ ಬಣ್ಣಗಳ ಶೇಡ್‌ಗಳಲ್ಲಿ 2023 ವರ್ನಾ ಬಿಡುಗಡೆ ಮಾಡಲಾಗಿದೆ. ಈ ವಾಹನಕ್ಕೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಪೊಸಿಷನಿಂಗ್ ಲ್ಯಾಂಪ್‌ಗಳು ಹಾಗೂ ಬ್ಲಾಕ್‌ ಕ್ರೋಂ ಪ್ಯಾರಾಮೆಟ್ರಿಲ್ ಗ್ರಿಲ್‌ ಅಪ್‌ಫ್ರಂಟ್‌ ಜೊತೆಗೆ ಡಿಆರ್‌ರ್ಎಲ್‌ಗಳನ್ನು ಹುಂಡೈನ ’ಸೆನ್ಸುವಸ್ ಸ್ಪೋರ್ಟಿನೆಸ್’ ವಿನ್ಯಾಸ ಭಾಷೆಯಲ್ಲಿ ಅಳವಡಿಸಲಾಗಿದೆ.

16 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳ ಮೇಲೆ ಈ ಹೊಸ ಸೆಡಾನ್ ಓಡಲಿದ್ದು, ಹಿಂಬದಿಯಲ್ಲಿ ಪ್ಯಾರಾಮೆಟ್ರಿಕ್ ಎಲ್‌ಇಡಿ ಟೇಲ್‌ ಲ್ಯಾಂಪ್‌ಗಳು ಹಾಗೂ ಶಾರ್ಕ್ ಫಿನ್ ಆಂಟೆನಾಗಳಿವೆ. 2023 ವರ್ನಾಗೆ 528 ಲೀಟರ್‌ಗಳಷ್ಟು ಬೂಟ್ ಸಾಮರ್ಥ್ಯ ಇದೆ.

ಕ್ಯಾಬಿನ್ ಒಳಗೆ ಡ್ಯುಯಲ್ ಟೋನ್ ಬ್ಲಾಕ್ ಮತ್ತು ಬೀಗ್ ಥೀಂನಲ್ಲಿ ಸಿಂಗರಿಸಲಾಗಿದೆ. 64 ಬಣ್ಣದ ಆಂಬಿಯೆಂಟ್ ಲೈಟಿಂಗ್, ಲೆದರ್‌ನಿಂದ ಮುಚ್ಚಲ್ಪಟ್ಟ ಪ್ರೀಮಿಯಂ 2 ಸ್ಪೋಕ್ ಸ್ಟಿಯರಿಂಗ್ ಚಕ್ರ ಮತ್ತು ಗೇರ್‌ ನಾಬ್, ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್‌ಪ್ಲೇ ಜೊತೆಗೆ 10.25 ಇಂಚಿನ ಎಚ್‌ಡಿ ಆಡಿಯೋ ವಿಡಿಯೋ ನೇವಿಗೇಷನ್ ವ್ಯವಸ್ಥೆ, ಬ್ಲೂಲಿಂಕ್ ಕನೆಕ್ಟಿವಿಟಿ, 10.25 ಇಂಜಿನ ಡಿಜಿಟಲ್ ಕ್ಲಸ್ಟರ್‌, ಕಲರ್‌ ಟಿಎಫ್‌ಟಿ ಎಂಐಡಿ, ಡ್ರೈವ್‌ ಮೋಡ್‌ ಸೆಲೆಕ್ಟ್, ಸ್ಮಾರ್ಟ್ ಫೋನ್ ವೈಯರ್‌ಲೆಸ್ ಚಾರ್ಜರ್‌‌, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್‌ನೊಂದಿಗೆ ಸ್ಮಾರ್ಟ್ ಕೀ ಮತ್ತು ಕ್ರೂಸ್ ಕಂಟ್ರೋಲ್‌ಗಳನ್ನು ಈ ಕಾರು ಹೊಂದಿದೆ. ‌

ಇನ್‌-ಬಿಲ್ಟ್ ನ್ಯಾವಿಗೇಷನ್, ಅಲೆಕ್ಸಾ & ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನೊಂದಿಗೆ ಹೋಂ ಟು ಕಾರ್‌ (ಎಚ್‌2ಸಿ) ಹಾಗೂ ಎಂಬೆಡೆಡ್‌ ವಾಯ್ಸ್‌ ಕಮಾಂಡ್‌ಗಳ ರೂಪದಲ್ಲಿ ಹೊಚ್ಚ ಹೊಸ ಫೀಚರ್‌ಗಳನ್ನೂ ಸಹ 2023 ವರ್ನಾ ಒಳಗೊಂಡಿದೆ.

ಸುರಕ್ಷತೆ ವಿಚಾರಕ್ಕೆ ಬಂದರೆ: ಎಲ್ಲಾ ಟ್ರಿಮ್‌ಗಳಲ್ಲೂ ಸ್ಟಾಂಡರ್ಡ್ ಫಿಟ್ಮೆಂಟ್‌ನ ಆರು ಏರ್‌ಬ್ಯಾಗ್‌ಗಳು, 2ನೇ ಹಂತದ ಅಡಾಸ್ ಟೆಕ್, ಫಾರ್ವರ್ಡ್ ಕೊಲಿಶನ್ ವಾರ್ನಿಂಗ್, ಬ್ಲೈಂಡ್-ಸ್ಪಾಟ್ ಕೊಲಿಶನ್ ವಾರ್ನಿಂಗ್, ಲೇನ್‌ ಕೀಪಿಂಗ್ ಅಸಿಸ್ಟ್‌, ಲೇನ್ ಡಿಪಾರ್ಚರ್‌ ವಾರ್ನಿಂಗ್, ಡ್ರೈವರ್‌ ಅಟೆಂಶನ್ ವಾರ್ನಿಂಗ್ ಹಾಗೂ ಸೇಫ್ ಎಕ್ಸಿಟ್ ವಾರ್ನಿಂಗ್‌ ಸೇರಿದಂತೆ ಅನೇಕ ಫೀಚರ್‌ಗಳನ್ನು 2023 ವರ್ನಾ ಒಳಗೊಂಡಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...