ಮಾರುತಿ ಸುಜುಕಿ ಪ್ರೇಮಿಗಳಿಗೆ ಸಂತೋಷದ ಸುದ್ದಿಯಿದೆ. ಬಿಡಗಡೆಗೂ ಮುನ್ನವೇ ಪ್ರೀಮಿಯಂ ಮಧ್ಯಮ ಗಾತ್ರದ ಎಸ್‌ಯುವಿ ಮಾರುತಿ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್ ಆಗಿದೆ. ಇದು ಮುಂದಿನ ವರ್ಷ ಹೊಸ ಅವತಾರದಲ್ಲಿ ಹೊರಬರಲಿದೆ. ಎಸ್-ಕ್ರಾಸ್ ನವೆಂಬರ್ 25 ರಂದು ಅನಾವರಣಗೊಳ್ಳಲಿದೆ.
ಶೀಘ್ರದಲ್ಲೇ 2022 ಸುಜುಕಿ ಎಸ್-ಕ್ರಾಸ್ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಬಿಡುಗಡೆಯಾಗಲಿದೆ.
ಐವಿಎಫ್ ಅವಾಂತರ: ಮೋಜಿಗಾಗಿ ಡಿಎನ್ಎ ಪರೀಕ್ಷೆ ಮಾಡಿಸಿ ಪೇಚಿಗೆ ಸಿಲುಕಿದ ದಂಪತಿ..!
ಬಿಡುಗಡೆಗೆ ಮುಂಚೆಯೇ, ಮಾರುತಿ ಸುಜುಕಿಯ ಈ ಕ್ರಾಸ್ ಒವರ್‌ನ ಫೋಟೋ ಸೋರಿಕೆಯಾಗಿದೆ. ಮಾರುತಿ ಸುಜುಕಿ ಪ್ರೀಮಿಯಂ ಎಸ್‌ಯುವಿ ಎಸ್-ಕ್ರಾಸ್‌ನ ನವೀಕರಿಸಿದ ಅವತಾರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಹೊಸ ಸುಜುಕಿ ಎಸ್-ಕ್ರಾಸ್ ಆಕರ್ಷಕವಾಗಿದೆ. ಇದರ ಉದ್ದ 4.2 ಮೀಟರ್ನಿಂದ 4.5 ಮೀಟರ್ ವರೆಗಿದೆ. ಹೊಸ ವಿನ್ಯಾಸದಲ್ಲಿ ಟ್ರೈ-ಬೀಮ್ ಎಲ್ ಇ ಡಿ ಹೆಡ್‌ಲ್ಯಾಂಪ್ ನೀಡಲಾಗಿದೆ. ಮುಂಭಾಗದ ಬಂಪರ್ ಮತ್ತು ಫಾಗ್ ಲ್ಯಾಂಪ್‌ಗಳಲ್ಲಿ ಸುಧಾರಣೆಯಾಗಿದೆ. ರ್ಯಾಕ್ಡ್ ಫ್ರಂಟ್ ವಿಂಡ್‌ಶೀಲ್ಡ್, ಹೊಸ ಮಿಶ್ರಲೋಹದ ಚಕ್ರಗಳು ಮತ್ತು ಇಳಿಜಾರಾದ ಮೇಲ್ಛಾವಣಿಯನ್ನು ಫೋಟೋದಲ್ಲಿ ನೋಡಬಹುದು.
ಮಾಧ್ಯಮ ವರದಿಗಳ ಪ್ರಕಾರ, ಹೊಸ ಸುಜುಕಿ ಎಸ್-ಕ್ರಾಸ್ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಜೊತೆಗೆ ಸ್ಟಾರ್ಟರ್ ಜನರೇಟರ್, ಟಾರ್ಕ್ ಅಸಿಸ್ಟ್ ಫಂಕ್ಷನ್ ಸೇರಿದಂತೆ ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ನವೀಕರಿಸಿದ ಎಸ್ ಕ್ರಾಸ್ ಪ್ರಸ್ತುತ ಮಾದರಿಯಂತೆಯೇ ಅಂದ್ರೆ 1.5 ಲೀಟರ್ ಕೆ15 ಪೆಟ್ರೋಲ್ ಎಂಜಿನ್ ಜೊತೆ ಬರಲಿದೆ. ಇದು 104ಬಿಎಚ್ಪಿ ಪವರ್ ಮತ್ತು 138ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದನ್ನು 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಜೊತೆಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ನೀಡಲಾಗಿದೆ.