ರೇಸ್ ಬೈಕ್ ಪ್ರೇಮಿಗಳಿಗೆ ಒಂದು ಖುಷಿ ಸುದ್ದಿಯಿದೆ. ಆದ್ರೆ ಆಕರ್ಷಕ ಬೈಕ್ ಬೆಲೆ ಬೆವರಿಳಿಸುತ್ತದೆ. ಡುಕಾಟಿ ಇಂಡಿಯಾ, ಹೊಸ Panigale V4 ಶ್ರೇಣಿಯ ಟಾಪ್ ಮಾಡೆಲ್ V4 SP ಬಿಡುಗಡೆ ಮಾಡಿದೆ. ಇದ್ರ ಬೆಲೆ ಬರೋಬ್ಬರಿ 36.07 ಲಕ್ಷ ರೂಪಾಯಿ.
ಕಂಪನಿ, V4 SP ಮಾಡೆಲನ್ನು ರೇಸ್‌ಟ್ರಾಕ್‌ಗೆ ಅನುಗುಣವಾಗಿ ವಿನ್ಯಾಸಗೊಳಿಸಿದೆ. ಇದರ ಭಾರ ಕಡಿಮೆ ಮಾಡಲು ಬೈಕ್‌ನಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಡುಕಾಟಿ V4 SP ಗೆ ಹಗುರವಾದ ಮಿಶ್ರಲೋಹದ ಚಕ್ರಗಳು ಮತ್ತು ಕಾರ್ಬನ್ ಫೈಬರ್ ಬಾಡಿವರ್ಕ್ ನೀಡಲಾಗಿದೆ. ಇದು ಬೈಕಿನ ತೂಕವನ್ನು 1.4 ಕೆಜಿಯಷ್ಟು ಕಡಿಮೆ ಮಾಡಿದೆ ಎಂದು ಕಂಪನಿ ಹೇಳಿದೆ.
ಡುಕಾಟಿಯು ಈ ಬೈಕನ್ನು ಅತ್ಯಾಕರ್ಷಕ ಕಪ್ಪು ಬಣ್ಣದಲ್ಲಿ ಪರಿಚಯಿಸಿದೆ. ಬೈಕ್ ಸ್ಟೈಲ್, ಬೈಕ್ ಪ್ರೇಮಿಗಳನ್ನು ಸೆಳೆಯುತ್ತದೆ. ಬೈಕ್ ಗೆ 1103 ಸಿಇ ಎಂಜಿನ್ ನೀಡಲಾಗಿದೆ. ಇದು 13000 rpm ನಲ್ಲಿ 211 bhp ಪವರ್ ಮತ್ತು 9500 rpm ನಲ್ಲಿ 124 Nm ಪೀಕ್ ಟಾರ್ಕ್ ನೀಡುತ್ತದೆ.
ಕಂಪನಿಯು ಬೈಕ್‌ನ ಎಂಜಿನ್‌ಗೆ 6-ಸ್ಪೀಡ್ ಗೇರ್‌ಬಾಕ್ಸ್ ನೀಡಿದೆ. ಹೊಸ ಬೈಕ್ ನಲ್ಲಿ ಉತ್ತಮವಾದ ಬ್ರೆಂಬೊ ಬ್ರೇಕಿಂಗ್ ಕಾಣಬಹುದು. ಡುಕಾಟಿಯು ಕಾರ್ಬನ್ ಫೈಬರ್ ಕ್ಲಚ್ ಕವರ್, ಮೆಷಿನ್ಡ್ ಮಿರರ್ ಬ್ಲಾಕ್-ಆಫ್ ಪ್ಲೇಟ್‌ಗಳಂತಹ ಟ್ರ್ಯಾಕ್ ಪರಿಕರಗಳನ್ನು ನೀಡುತ್ತಿದೆ. ಹೊಸ Panigale V4 SP ಕ್ವಿಕ್‌ಶಿಫ್ಟರ್, ರೈಡಿಂಗ್ ಮತ್ತು ಪವರ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್, ವೀಲಿ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್‌ನಂತಹ ಹಲವು ವೈಶಿಷ್ಟ್ಯಗಳನ್ನು ಒದಗಿಸಿದೆ.
ಮೊದಲೇ ಹೇಳಿದಂತೆ ಇದ್ರ ಬೆಲೆ ದುಬಾರಿ. ಇದ್ರ ಬೆಲೆಗೆ ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿಯ 7 ಸೆಲೆರಿಯೊವನ್ನು ಖರೀದಿಸಬಹುದು. ಮಾರುತಿ ಸುಜುಕಿ ಸೆಲೆರಿಯೊ ಆರಂಭಿಕ ಬೆಲೆ 4.99 ಲಕ್ಷ ರೂಪಾಯಿ.