alex Certify ಈ ರೈಲು ನಿಲ್ದಾಣದಲ್ಲಿದೆ ಏರ್​ಪೋರ್ಟ್ ಮಾದರಿ ಸೌಲಭ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೈಲು ನಿಲ್ದಾಣದಲ್ಲಿದೆ ಏರ್​ಪೋರ್ಟ್ ಮಾದರಿ ಸೌಲಭ್ಯ..!

ದೆಹಲಿ ರೈಲ್ವೆ ನಿಲ್ದಾಣವು ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಮಾದರಿಯ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಪ್ರಯಾಣಿಕರ ಪ್ರಯಾಣವು ಸುಖಕರವಾಗಿರಲಿ ಎಂಬ ದೃಷ್ಠಿಯಿಂದ ಫ್ಲಾಟ್​ಫಾರಂ ನಂಬರ್ 1ರಲ್ಲಿ ಐಆರ್​ಸಿಟಿಸಿ ಎಕ್ಸಿಕ್ಯೂಟಿವ್​ ಲಾಂಜ್​ ನಿರ್ಮಾಣ ಮಾಡಿದೆ. ಇಲ್ಲಿ ಪ್ರಯಾಣಿಕರು ಏರ್​ಪೋರ್ಟ್​ನಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಅನುಭವಿಸಲಿದ್ದಾರೆ.

ಮಸಾಜ್​ ಚೇರ್​ ವ್ಯವಸ್ಥೆ, ಸಂಗೀತ, ಬ್ಯುಸಿನೆಸ್​ ಸೆಂಟರ್​ ಸೌಲಭ್ಯ ಹೀಗೆ ಥೇಟ್​ ವಿಮಾನ ನಿಲ್ದಾಣದಲ್ಲಿ ಸಿಗುವಂತೆ ಎಲ್ಲಾ ಸೌಲಭ್ಯಗಳು ಈ ಲಾಂಜ್​​ನಲ್ಲಿ ಸಿಗಲಿದೆ.

ಕಚೇರಿ ಕೆಲಸವನ್ನು ಮಾಡಬೇಕೆಂದು ಬಯಸುವ ಪ್ರಯಾಣಿಕರು ಬ್ಯುಸಿನೆಸ್​ ಲಾಂಜ್​ಗೆ ತೆರಳಿದ್ರೆ ಅಲ್ಲಿ ಅವರಿಗೆ ಇಂಟರ್ನೆಟ್​ ಸೌಲಭ್ಯ ಹೊಂದಿರುವ ಕಂಪ್ಯೂಟರ್​ಗಳು ಸಿಗಲಿದೆ.

ಟಿವಿ, ಇಂಟರ್ನೆಟ್, ವೈಫೈ ಈ ಎಲ್ಲಾ ಸೌಕರ್ಯಗಳನ್ನು ಹೊರತುಪಡಿಸಿ ಇಲ್ಲಿ ನಿಮಗೆ ತರಹೇವಾರಿ ಖಾದ್ಯಗಳು ಕೂಡ ಸಿಗಲಿದೆ. ಅಂದಹಾಗೆ ಈ ಎಲ್ಲಾ ಸೌಲಭ್ಯಗಳನ್ನು ಆನಂದಿಸಲು ಪ್ರಯಾಣಿಕರು ಹಣ ಖರ್ಚು ಮಾಡಬೇಕು.

ಮೊದಲ 1 ಗಂಟೆ ಅವಧಿಗೆ 150 ರೂಪಾಯಿ ಪ್ರವೇಶ ಶುಲ್ಕ, ಇದಾಗಿ ನಂತರದ ಪ್ರತಿ 1 ಗಂಟೆಗೆ ಹೆಚ್ಚುವರಿ 99 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. 24 ಗಂಟೆ ಅವಧಿಯಲ್ಲೂ ಪ್ರಯಾಣಿಕರಿಗೆ ಈ ಸೌಲಭ್ಯಗಳು ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...