ಕಾಸರಗೋಡು: ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಬಂಬ್ರಾಣದಲ್ಲಿ ಮಂಗಳವಾರ ನಡೆದಿದೆ.
ಅಬ್ದುಲ್ ಅಜಿತ್ -ಖದೀಜಾ ದಂಪತಿಯ ಎರಡೂವರೆ ತಿಂಗಳ ಪುತ್ರಿ ಗಂಟಲಲ್ಲಿ ಹಾಲು ಸಿಲುಕಿ ಮೃತಪಟ್ಟಿದ್ದಾಳೆ. ಮಲಗಿಕೊಂಡು ಎದೆ ಹಾಲು ಕುಡಿದ ಮಗು ನಂತರ ಬಹಳ ಹೊತ್ತಾದರೂ ಎಚ್ಚರಗೊಳ್ಳದಿದ್ದಾಗ ಗಾಬರಿಯಾದ ಮನೆಯವರು ಕುಂಬಳೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ತಲುವ ಮೊದಲೇ ಮಗು ಮೃತಪಟ್ಟಿದೆ ಎಂದು ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಕುಂಬಳೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.