ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರತಂಡವನ್ನು ಕಪಿಲ್ ಶರ್ಮಾ ಶೋಗೆ ಇನ್ವೈಟ್ ಮಾಡದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈಗಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಬಿಗ್ ಸ್ಟಾರ್ ಇಲ್ಲದ ಚಿತ್ರವನ್ನು ಕಪಿಲ್ ಪ್ರಮೋಟ್ ಮಾಡುವುದಿಲ್ಲ ಎಂದು ನಿರ್ದೇಶದ ವಿವೇಕ್ ರಂಜನ್ ಅಗ್ನಿಹೋತ್ರಿ, ಕಪಿಲ್ ವಿರುದ್ಧ ಆರೋಪಿಸಿದ್ದರು. ವಿವೇಕ್ ಆರೋಪವನ್ನು ತಳ್ಳಿಹಾಕಿರುವ ಕಪಿಲ್ ಎಲ್ಲವನ್ನು ನಂಬಬೇಡಿ ಎಂದಿದ್ದಾರೆ.
ಈ ವಿಚಾರವಾಗಿ ಟ್ವಿಟ್ಟರ್ ಬಳಕೆದಾರೊಬ್ಬರು ಕಪಿಲ್ ಶರ್ಮಾ ಅವರನ್ನು ಟ್ಯಾಗ್ ಮಾಡಿ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರಮೋಟ್ ಮಾಡಲು ಏಕೆ ಹಿಂಜರಿಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಕಪಿಲ್ ವಿವೇಕ್ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ.
ಬೆರಗಾಗಿಸುತ್ತೆ ಚಿತ್ರವೊಂದಕ್ಕೆ ನಟಿ ಸಮಂತಾ ಪಡೆಯುವ ಸಂಭಾವನೆ…!
ವಿವೇಕ್ ಅವರ ಆರೋಪ ನಿಜವಲ್ಲ. ನೀವು ಕೇಳಿದ್ದೀರಾ ಎಂದು ಉತ್ತರಿಸುತ್ತಿದ್ದೇನೆ. ನನ್ನ ವಿರುದ್ಧದ ಆರೋಪವನ್ನು ನಿಜವೆಂದು ನಂಬಿರುವವರಿಗೆ ಇದರ ಬಗ್ಗೆ ವಿವರಿಸಿ ಪ್ರಯೋಜನವಿಲ್ಲ. ಅನುಭವವಿರುವ ಸಾಮಾಜಿಕ ಮಾಧ್ಯಮದ ಬಳಕೆದಾರನಾಗಿ ಒಂದು ಸಲಹೆ ನೀಡುತ್ತೇನೆ, ಈ ಯುಗದ ಸೋಷಿಯಲ್ ಮೀಡಿಯಾ ಲೋಕದಲ್ಲಿ ಒಂದು ಕಡೆಯ ಕಥೆಯನ್ನು ಕೇಳಿ ಅದೇ ನಿಜ ಎಂದು ನಂಬಬೇಡಿ ಎಂದು ಕಪಿಲ್ ಉತ್ತರಿಸಿದ್ದಾರೆ. ಆದರೆ ಚಿತ್ರತಂಡವನ್ನು ತಮ್ಮ ಶೋಗೆ ಆಹ್ವಾನಿಸದ ಕಾರಣವನ್ನು ತಿಳಿಸಿಲ್ಲಾ.