alex Certify ರೈಲಿನಲ್ಲಿ ಖರೀದಿಸಿದ ಆಮ್ಲೇಟ್​ನಲ್ಲಿ ಸತ್ತ ಜಿರಳೆ: ರೈಲ್ವೆ ಇಲಾಖೆ ವಿರುದ್ಧ ನೆಟ್ಟಿಗರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಖರೀದಿಸಿದ ಆಮ್ಲೇಟ್​ನಲ್ಲಿ ಸತ್ತ ಜಿರಳೆ: ರೈಲ್ವೆ ಇಲಾಖೆ ವಿರುದ್ಧ ನೆಟ್ಟಿಗರ ಆಕ್ರೋಶ

ನವದೆಹಲಿ: ಮುಂಬೈ ಸಿಎಸ್‌ಎಂಟಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಡಿಸಿದ ಆಹಾರದ ಚಿತ್ರವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಭಾರತೀಯ ರೈಲ್ವೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಯೋಗೇಶ್ ಮೋರ್ ಎಂಬ ಬಳಕೆದಾರರು ಈ ಫೋಟೋ ಹಂಚಿಕೊಂಡಿದ್ದಾರೆ. ಡಿಸೆಂಬರ್ 16 ರಂದು ತಮ್ಮ ಎರಡೂವರೆ ವರ್ಷದ ಮಗಳಿಗೆ ಆಹಾರವನ್ನು ಆರ್ಡರ್ ಮಾಡಿದಾಗ ಅದರಲ್ಲಿ ಸತ್ತ ಜಿರಳೆ ಇರುವುದನ್ನು ಅವರು ನೋಡಿದ್ದಾರೆ. ದೆಹಲಿಯಿಂದ ರಾಜಧಾನಿ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಗುವಿಗೆ ಆಮ್ಲೆಟ್ ತರಿಸಿದ್ದರು. ಅದರಲ್ಲಿ ಸತ್ತ ಜಿರಳೆ ಇತ್ತು.

ಇದನ್ನು ಕಂಡು ಶಾಕ್​ ಆಗಿರುವ ಅವರು ಅದರ ಫೋಟೋ ತೆಗೆದು ಶೇರ್ ಮಾಡಿದ್ದಾರೆ. ಇದನ್ನು ನೋಡದೇ ತಿಂದಿದ್ದರೆ ನನ್ನ ಎರಡೂವರೆ ವರ್ಷದ ಮಗಳಿಗೆ ಏನಾದರೂ ಸಂಭವಿಸಿದಲ್ಲಿ, ಅದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರೈಲ್ವೇ ಸೇವಾ ಸಂಸ್ಥೆಯು, ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ಸರ್, ದಯವಿಟ್ಟು ನಿಮ್ಮ ಮಾಹಿತಿ ನೀಡಿ ಎಂದು ಪ್ರತಿಕ್ರಿಯೆ ನೀಡಲಾಗಿದೆ. ಆದರೆ ಈ ಫೋಟೋ ನೋಡಿ ನೆಟ್ಟಿಗರು ರೈಲ್ವೆ ಇಲಾಖೆಗೆ ಛೀಮಾರಿ ಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...