alex Certify ಟೀಂ ಇಂಡಿಯಾ ಆಟಗಾರರಿಗೆ ‘ಹಲಾಲ್​’ ಮಾಂಸ: ಬಿಸಿಸಿಐ ವಿರುದ್ಧ ನೆಟ್ಟಿಗರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಆಟಗಾರರಿಗೆ ‘ಹಲಾಲ್​’ ಮಾಂಸ: ಬಿಸಿಸಿಐ ವಿರುದ್ಧ ನೆಟ್ಟಿಗರ ಆಕ್ರೋಶ

ನ್ಯೂಜಿಲೆಂಡ್​ ವಿರುದ್ಧ ಟಿ 20 ಸರಣಿಯಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಂಡಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯಕ್ಕೆ ತಯಾರಾಗುತ್ತಿದೆ.

ಟೀಂ ಇಂಡಿಯಾ ಅಭಿಮಾನಿಗಳು ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ನಡುವೆಯೇ ಭಾರತೀಯ ಕ್ರಿಕೆಟ್​ ಆಟಗಾರರಿಗೆ ಬಿಸಿಸಿಐ ನೀಡಿರುವ ಆಹಾರದ ವೇಳಾಪಟ್ಟಿಯು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೊದಲ ಟೆಸ್ಟ್​ ಪಂದ್ಯಕ್ಕಾಗಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳೆರಡೂ ಕಾನ್ಪುರ ತಲುಪಿವೆ. ಬಯೋ ಬಬಲ್​ನಲ್ಲಿ ಇರುವ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಭೋಜನವನ್ನು ಒಳಗೊಂಡ ಆಹಾರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಹಲಾಲ್​ ಮಾಂಸ ಸೇವನೆಗೆ ಮಾತ್ರ ಅವಕಾಶ ನೀಡಿದೆ.

ಮುಸ್ಲಿಂ ಧರ್ಮದಲ್ಲಿ ಹಲಾಲ್​ ಮಾಂಸ ಸೇವನೆಗೆ ಮಹತ್ವವಿದೆ. ಆದರೆ ಹಿಂದೂ ಹಾಗೂ ಸಿಖ್​ ಧರ್ಮದಲ್ಲಿ ಎಲ್ಲಾ ಮಾದರಿಯ ಹಲಾಲ್​ ಮಾಂಸವನ್ನು ಸೇವಿಸಲು ಅವಕಾಶವಿಲ್ಲ. ಟೀಂ ಇಂಡಿಯಾದಲ್ಲಿ ಎಲ್ಲಾ ಧರ್ಮದ ಆಟಗಾರರು ಇದ್ದಾರೆ. ಹೀಗಿರುವಾಗ ಹಲಾಲ್​ ಮಾಂಸಕ್ಕೆ ಮಾತ್ರ ಅವಕಾಶ ನೀಡಿದ್ದು ಏನಕ್ಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಮುಸ್ಲಿಂ ಧರ್ಮದ ಆಹಾರ ಕ್ರಮದಲ್ಲಿ ಹಲಾಲ್​ ಮಾಂಸ ಎಂಬ ಪದ ಬಳಕೆ ಇದೆ. ಅಂದರೆ ಮುಸ್ಲಿಮರಿಗೆ ಎಲ್ಲಾ ಮಾಂಸಗಳನ್ನು ಸೇವನೆ ಮಾಡಲು ಅವಕಾಶ ಇರೋದಿಲ್ಲ. ಮುಸ್ಲಿಮರು ಹಲಾಲ್​​ ಮಾಡುವ ಮೂಲಕ ಮಾಂಸವನ್ನ ಸೇವಿಸಬೇಕು. ಅಂದರೆ ಪ್ರಾಣಿಯ ಕತ್ತಿನ ನರವನ್ನು ಕತ್ತರಿಸಿ ಪೂರ್ತಿ ರಕ್ತವನ್ನು ತೆಗೆದ ಬಳಿಕವೇ ಸೇವನೆ ಮಾಡಲು ಅವಕಾಶವಿದೆ. ಹಲಾಲ್​ ಆಹಾರ ಕ್ರಮದ ಪ್ರಕಾರ ಇಸ್ಲಾಂ ಧರ್ಮದವರು ಹಂದಿ, ಹುಲಿ ಹಾಗೂ ಸಿಂಹದ ಮಾಂಸವನ್ನು ಸೇವಿಸುವುದಿಲ್ಲ. ಟೀಂ ಇಂಡಿಯಾ ಆಟಗಾರರಿಗೆ ಗೋಮಾಂಸ ಹಾಗೂ ಹಂದಿ ಮಾಂಸದ ಸೇವನೆಗೆ ನಿಷಿದ್ಧ ಹೇರಲಾಗಿದೆ.

— ?Harshad Dhamale™ ?? (@iDivineArjuna) November 23, 2021

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...