
ಟೀಂ ಇಂಡಿಯಾ ಅಭಿಮಾನಿಗಳು ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ನಡುವೆಯೇ ಭಾರತೀಯ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ನೀಡಿರುವ ಆಹಾರದ ವೇಳಾಪಟ್ಟಿಯು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೊದಲ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳೆರಡೂ ಕಾನ್ಪುರ ತಲುಪಿವೆ. ಬಯೋ ಬಬಲ್ನಲ್ಲಿ ಇರುವ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಭೋಜನವನ್ನು ಒಳಗೊಂಡ ಆಹಾರದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಹಲಾಲ್ ಮಾಂಸ ಸೇವನೆಗೆ ಮಾತ್ರ ಅವಕಾಶ ನೀಡಿದೆ.
ಮುಸ್ಲಿಂ ಧರ್ಮದಲ್ಲಿ ಹಲಾಲ್ ಮಾಂಸ ಸೇವನೆಗೆ ಮಹತ್ವವಿದೆ. ಆದರೆ ಹಿಂದೂ ಹಾಗೂ ಸಿಖ್ ಧರ್ಮದಲ್ಲಿ ಎಲ್ಲಾ ಮಾದರಿಯ ಹಲಾಲ್ ಮಾಂಸವನ್ನು ಸೇವಿಸಲು ಅವಕಾಶವಿಲ್ಲ. ಟೀಂ ಇಂಡಿಯಾದಲ್ಲಿ ಎಲ್ಲಾ ಧರ್ಮದ ಆಟಗಾರರು ಇದ್ದಾರೆ. ಹೀಗಿರುವಾಗ ಹಲಾಲ್ ಮಾಂಸಕ್ಕೆ ಮಾತ್ರ ಅವಕಾಶ ನೀಡಿದ್ದು ಏನಕ್ಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಮುಸ್ಲಿಂ ಧರ್ಮದ ಆಹಾರ ಕ್ರಮದಲ್ಲಿ ಹಲಾಲ್ ಮಾಂಸ ಎಂಬ ಪದ ಬಳಕೆ ಇದೆ. ಅಂದರೆ ಮುಸ್ಲಿಮರಿಗೆ ಎಲ್ಲಾ ಮಾಂಸಗಳನ್ನು ಸೇವನೆ ಮಾಡಲು ಅವಕಾಶ ಇರೋದಿಲ್ಲ. ಮುಸ್ಲಿಮರು ಹಲಾಲ್ ಮಾಡುವ ಮೂಲಕ ಮಾಂಸವನ್ನ ಸೇವಿಸಬೇಕು. ಅಂದರೆ ಪ್ರಾಣಿಯ ಕತ್ತಿನ ನರವನ್ನು ಕತ್ತರಿಸಿ ಪೂರ್ತಿ ರಕ್ತವನ್ನು ತೆಗೆದ ಬಳಿಕವೇ ಸೇವನೆ ಮಾಡಲು ಅವಕಾಶವಿದೆ. ಹಲಾಲ್ ಆಹಾರ ಕ್ರಮದ ಪ್ರಕಾರ ಇಸ್ಲಾಂ ಧರ್ಮದವರು ಹಂದಿ, ಹುಲಿ ಹಾಗೂ ಸಿಂಹದ ಮಾಂಸವನ್ನು ಸೇವಿಸುವುದಿಲ್ಲ. ಟೀಂ ಇಂಡಿಯಾ ಆಟಗಾರರಿಗೆ ಗೋಮಾಂಸ ಹಾಗೂ ಹಂದಿ ಮಾಂಸದ ಸೇವನೆಗೆ ನಿಷಿದ್ಧ ಹೇರಲಾಗಿದೆ.