ಸಹರಾ ಇಂಡಿಯಾ ಸಮೂಹ ಹಾಗೂ ಅದರ ಮಾಲೀಕ ಸುಬ್ರತಾ ರಾಯ್‌ರನ್ನು ಅವಹೇಳನ ಮಾಡಲಾಗಿದೆ ಎಂಬ ಆಪಾದನೆಯಲ್ಲಿ ನೆಟ್‌ಫ್ಲಿಕ್ಸ್ ಹಾಗೂ ಅದರ ಕೆಲ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿದೆ.
ಕಳೆದ ವರ್ಷ ಬಿಡುಗಡೆಯಾದ ’ಬ್ಯಾಡ್ ಬಾಯ್ಸ್ ಬಿಲಿಯನೇರ್ಸ್ ಇಂಡಿಯಾ’ ಹೆಸರಿನ ಡಾಕ್ಯುಮೆಂಟರಿ ಸರಣಿಯ ನಿರ್ದೇಶಕ ನಿಕ್ ರೀಡ್ ಮತ್ತು ನಿರ್ಮಾಪಕ ರೇವಾ ಶರ್ಮಾ ಜೊತೆಗೆ ನೆಟ್‌ಫ್ಲಿಕ್ಸ್ ನಿರ್ದೇಶಕ ಅಭಿಷೇಕ್ ನಾಗ್‌ಗೆ ಸಮನ್ಸ್ ನೀಡಲಾಗಿದೆ.
ಹೈಟೆನ್ಶನ್ ವೈರ್ ನಲ್ಲಿ ಸಿಲುಕಿದ್ದ ಪಾರಿವಾಳ ರಕ್ಷಣೆ…! ನಿಬ್ಬೆರಗಾಗಿಸುತ್ತೆ ಈ ಕಾರ್ಯಾಚರಣೆ
ನವೆಂಬರ್ 15ರಂದು ಕೋರ್ಟ್‌ಗೆ ಹಾಜರಾಗಿ ವಿಚಾರಣೆ ಎದುರಿಸಲು ನ್ಯಾಯಾಧೀಶ ಸುನೀಲ್ ಕುಮಾರ್ ಈ ಮೂವರಿಗೆ ಆದೇಶ ನೀಡಿದ್ದಾರೆ. ಐಪಿಸಿ ಸೆಕ್ಷನ್ 500(ಮಾನ ಹಾನಿ), 501(ಅವಹೇಳನಕಾರಿ ವಿಷಯದ ಪ್ರಕಟಣೆ) ಮತ್ತು 502 (ಮಾನ ಹಾನಿಯ ವಿಷಯವನ್ನು ಮಾರಾಟ ಮಾಡುವುದು) ಅಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಹರಾ ಇಂಡಿಯಾ ಹಾಗೂ ಅದರ ನೌಕರರು ನೀಡಿದ ದೂರಿನ ಅನ್ವಯ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.
ಅವಳಿ ಮಕ್ಕಳೊಂದಿಗೆ ತಾಯಿ ಫೋಸ್: ವಿಡಿಯೋ ನೋಡಿ ನೆಟ್ಟಿಗರು ಶಾಕ್
“ಡಾಕ್ಯುಮೆಂಟರಿಯನ್ನು ಇನ್ನಷ್ಟು ಕಾಲ್ಪನಿಕ ಹಾಗೂ ಮಸಾಲೆಭರಿತವಾಗಿ ಮಾಡುವ ಉದ್ದೇಶದಿಂದ ಎಲ್ಲಾ ಆಪಾದಿತರೂ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಬೇಕಂತಲೇ ಸಹರಾ ಸಮೂಹವನ್ನು ಕೆಟ್ಟದಾಗಿ ತೋರಿದ್ದಾರೆ,” ಎಂದು ದೂರುದಾರರಾದ ಘುಲಾಂ ಜ಼ೀಶನ್ ಮತ್ತು ಭುವೇಶ್ ಮಣಿ ತ್ರಿಪಾಠಿ ಆಪಾದಿಸಿದ್ದಾರೆ.