alex Certify ಪ್ರೀತಿಗೆ ಒಪ್ಪದ ಯುವತಿ, ಪಾಗಲ್ ಪ್ರೇಮಿಯಿಂದ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಗೆ ಒಪ್ಪದ ಯುವತಿ, ಪಾಗಲ್ ಪ್ರೇಮಿಯಿಂದ ಘೋರ ಕೃತ್ಯ

ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ಪ್ರೀತಿಸಲು ನಿರಾಕರಿಸಿದ್ದ ಯುವತಿಯ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯ ಕುವೆಂಪುನಗರದಲ್ಲಿ ಘಟನೆ ನಡೆದಿದೆ. ರಾಡ್ ನಿಂದ ಹಲ್ಲೆ ಮಾಡಿ ಯುವತಿಯ ತಂದೆ 48 ವರ್ಷದ ನಾಗಪ್ಪನನ್ನು ಹತ್ಯೆ ಮಾಡಲಾಗಿದೆ. 28 ವರ್ಷದ ಪಾಗಲ್ ಪ್ರೇಮಿ ನರೇಶ್ ಮತ್ತು ಆತನ ನಾಲ್ವರು ಸಹಚರರು ಇಂತಹ ಕೃತ್ಯವೆಸಗಿದ್ದಾರೆ. ಕಳೆದ ಒಂದು ವರ್ಷದಿಂದ ಯುವತಿಯನ್ನು ನರೇಶ್ ಪ್ರೀತಿಸುತ್ತಿದ್ದು, ಆತನ ಪ್ರೀತಿಯನ್ನು ಯುವತಿ ಮತ್ತು ತಂದೆ ವಿರೋಧಿಸಿದ್ದರು. ಈ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ನೆಲಮಂಗಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...