ಇಂಗ್ಲೆಂಡ್ ದಕ್ಷಿಣ ಯಾರ್ಕ್ಶೈರ್ನ ನಿವಾಸಿಯೊಬ್ಬ ಮರವೊಂದನ್ನ ಸರಿಯಾಗಿ ಅರ್ಧ ಭಾಗಕ್ಕೆ ಕತ್ತರಿಸಿದ್ದು ಈ ಮೂಲಕ ಈ ಮರವು ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿ ಬದಲಾಗಿದೆ.
ಪಕ್ಕದ ಮನೆಯವರು ಕಳೆದ 25 ವರ್ಷಗಳಿಂದ ತಲೆ ಎತ್ತಿದ್ದ ಫರ್ ಜಾತಿಯ ಮರದ ಕೊಂಬೆಗಳನ್ನ ಅರ್ಧ ಕೊಂಬೆಗಳನ್ನ ಕತ್ತರಿಸಲು ಹೇಳಿದ ಬಳಿಕ 56 ವರ್ಷದ ಭರತ್ ಮಿಸ್ತ್ರಿ ಹಾಗೂ ಕುಟುಂಬಸ್ಥರು ಕೆಲ ಕಾಲ ಶಾಕ್ಗೊಳಗಾಗಿದ್ದರು.
ಅಂದಹಾಗೆ ಈ ಮರವನ್ನ ಈ ರೀತಿ ಕತ್ತರಿಸಲು ಕಾರಣವೇನು ಎಂಬ ಪ್ರಶ್ನೆ ಉದ್ಭವಿಸಬಹುದು.
ಈ ಮರದ ವಿಚಾರವಾಗಿ ಎರಡೂ ಕುಟುಂಬದ ನಡುವೆ ಬಹಳ ದಿನಗಳಿಂದ ವ್ಯಾಜ್ಯ ನಡೆಯುತ್ತಲೇ ಇತ್ತು. ಮರದ ಮೇಲೆ ಕೂತ ಪಾರಿವಾಳವು ಮಾಡುವ ಶಬ್ದ ಹಾಗೂ ಅವುಗಳ ಮಲ ವಿಸರ್ಜನೆಯಿಂದ ನೆರೆ ಮನೆಯವರು ಯಾವಾಗಲು ಕಿರಿಕಿರಿಗೆ ಒಳಗಾಗಿದ್ದರು.
ಹೀಗಾಗಿ ಒಪ್ಪಂದದ ಪ್ರಕಾರ ನೆರೆಮನೆಯವರು ತಮ್ಮ ಮನೆ ಬದಿಯಿದ್ದ ಮರವನ್ನ ಮಾತ್ರ ಕತ್ತರಿಸಿದ್ದಾರೆ. ಅರ್ಧ ಕತ್ತರಿಸಿದ ಮರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು ವೈರಲ್ ಆಗಿದೆ.