alex Certify ನೆಹರೂ ಮಹಾನ್ ವ್ಯಕ್ತಿ, ನೀವೇಕೆ ಅವರ ಸರ್ ನೇಮ್ ಬಳಸಬಾರದು? ಗಾಂಧಿ ಕುಟುಂಬಕ್ಕೆ ಕುಟುಕಿದ ಪ್ರಧಾನಿ ಮೋದಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಹರೂ ಮಹಾನ್ ವ್ಯಕ್ತಿ, ನೀವೇಕೆ ಅವರ ಸರ್ ನೇಮ್ ಬಳಸಬಾರದು? ಗಾಂಧಿ ಕುಟುಂಬಕ್ಕೆ ಕುಟುಕಿದ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ನೆಹರೂ ಮಹಾನ್ ವ್ಯಕ್ತಿ, ನೀವು ಅವರ ಉಪನಾಮವನ್ನು ಏಕೆ ಬಳಸಬಾರದು? ಎಂದು ರಾಹುಲ್ ಗಾಂಧಿ ಕುಟುಂಬದವರ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ, ತಮ್ಮ ತಲೆಮಾರಿನ ಜನರು ನೆಹರೂ ಅನ್ನು ತಮ್ಮ ಉಪನಾಮವಾಗಿ ಏಕೆ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ನೆಹರು ಅಂತಹ ಮಹಾನ್ ವ್ಯಕ್ತಿಯಾಗಿದ್ದಲ್ಲಿ ಅವರ ಉಪನಾಮವನ್ನು ಬಳಸುವುದರಿಂದ ಕುಟುಂಬ(ಗಾಂಧಿಗಳು) ಏಕೆ ಹಿಂದೆ ಸರಿಯುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕೆಲವರಿಗೆ ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಸಮಸ್ಯೆಗಳಿವೆ. ನಾನು ವರದಿಯಲ್ಲಿ 600 ಸರ್ಕಾರಿ ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ಓದಿದ್ದೇನೆ. ಅವರ ಪೀಳಿಗೆಯ ಜನರು ಏಕೆ ಸರ್ ನೇಮ್ ಬಳಸುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ನೆಹರೂ ಅವರ ಹೆಸರನ್ನು ಉಪನಾಮವಾಗಿ ಇಟ್ಟುಕೊಳ್ಳಿ, ಅದಕ್ಕೆ ಭಯ ಮತ್ತು ಅವಮಾನ ಏಕೆ ಎಂದು ಪ್ರಧಾನಿ ಕೇಳಿದ್ದಾರೆ.

ಚುನಾಯಿತ ಸರ್ಕಾರಗಳನ್ನು 90 ಬಾರಿ ಉರುಳಿಸಲಾಗಿದೆ, ಅದನ್ನು ಮಾಡಿದವರು ಯಾರು? ಪ್ರಧಾನಿಯೊಬ್ಬರು 356 ನೇ ವಿಧಿಯನ್ನು 50 ಬಾರಿ ಬಳಸಿದರು. ಅವರ ಹೆಸರು ಇಂದಿರಾ ಗಾಂಧಿ. ಕೇರಳದಲ್ಲಿ ಪಂಡಿತ್ ನೆಹರೂಗೆ ಇಷ್ಟವಾಗದ ಕಮ್ಯುನಿಸ್ಟ್ ಸರ್ಕಾರವನ್ನು ಪತನಗೊಳಿಸಲಾಯಿತು ಎಂದು ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...