alex Certify ದೀಪಿಕಾ ಪಡುಕೋಣೆ ಹಿಂದಿಕ್ಕಿ ನೇಹಾ ಕಕ್ಕರ್ ಮಾಡಿದ್ದಾರೆ ಈ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಿಕಾ ಪಡುಕೋಣೆ ಹಿಂದಿಕ್ಕಿ ನೇಹಾ ಕಕ್ಕರ್ ಮಾಡಿದ್ದಾರೆ ಈ ಸಾಧನೆ

ಇಂಡಿಯನ್ ಐಡಲ್ 12 ರ ತೀರ್ಪುಗಾರ್ತಿಯಾಗಿರುವ ನೇಹಾ ಕಕ್ಕರ್ ಪ್ರಸಿದ್ಧ ಗಾಯಕಿ. ನೇಹಾ ಕಕ್ಕರ್ ಹಾಡಿಗೆ ಮರುಳಾಗದ ಜನರಿಲ್ಲ. ನೇಹಾ ಕಳೆದ ಐದು ವರ್ಷದಲ್ಲಿ ಹಾಡಿದ ಎಲ್ಲ ಹಾಡುಗಳೂ ಅಭಿಮಾನಿಗಳ ಮನ ಗೆದ್ದಿದೆ. ಯೂಟ್ಯೂಬ್‌ನಲ್ಲಿ ನೇಹಾ ಕಕ್ಕರ್ ಹಾಡಿಗೆ ಸಾಕಷ್ಟು ಬೇಡಿಕೆಯಿದೆ.

ಸಂಗೀತ ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿರುವ ನೇಹಾ ಕಕ್ಕರ್, ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ನೇಹಾ ಫಾಲೋವರ್ಸ್ ಸಂಖ್ಯೆ 60 ಮಿಲಿಯನ್ ದಾಟಿದೆ. ಇಷ್ಟೊಂದು ಫಾಲೋವರ್ಸ್ ಹೊಂದಿರುವ ಭಾರತದ ಮೊದಲ ಗಾಯಕಿಯಾಗಿದ್ದಾರೆ ನೇಹಾ.

ಫಾಲೋವರ್ಸ್ ವಿಷ್ಯದಲ್ಲಿ ನಟಿ ದೀಪಿಕಾ ಪಡುಕೋಣೆಯನ್ನು ಹಿಂದಿಕ್ಕಿದ್ದಾರೆ ನೇಹಾ. ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಪಡುಕೋಣೆಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ನೇಹಾ, ಶ್ರದ್ಧಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾಗಿಂತ ಹಿಂದಿದ್ದಾರೆ. ಶ್ರದ್ಧಾ ಹಾಗೂ ಪ್ರಿಯಾಂಕಾ ಚೋಪ್ರಾ, ಕ್ರಮವಾಗಿ 63 ಹಾಗೂ 65 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಶೀಘ್ರದಲ್ಲಿಯೇ ಇಬ್ಬರನ್ನೂ ನೇಹಾ ಹಿಂದಿಕ್ಕುವುದ್ರಲ್ಲಿ ಸಂಶಯವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...