alex Certify ಜನವರಿ 12 ರಂದು NEET-PG ಕೌನ್ಸೆಲಿಂಗ್ ಪ್ರಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 12 ರಂದು NEET-PG ಕೌನ್ಸೆಲಿಂಗ್ ಪ್ರಾರಂಭ

ನವದೆಹಲಿ: NEET-PG ಕೌನ್ಸೆಲಿಂಗ್ ಜನವರಿ 12 ರಂದು ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಂಡವಿಯಾ ಅವರು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದು ದೇಶಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಈ ಪ್ರಕಟಣೆಯು ಸ್ನಾತಕೋತ್ತರ ಕೋರ್ಸ್‌ ಗಳಿಗೆ ಪ್ರವೇಶಕ್ಕಾಗಿ ಕಾಯುತ್ತಿರುವ ಹಲವಾರು ವೈದ್ಯರಿಗೆ ಪರಿಹಾರ ನೀಡಲಿದೆ. ಅಖಿಲ ಭಾರತ ಕೋಟಾದ ಸೀಟುಗಳಲ್ಲಿ ಅಸ್ತಿತ್ವದಲ್ಲಿರುವ 27% OBC ಮತ್ತು 10% EWS ಮೀಸಲಾತಿಗಳ ಆಧಾರದ ಮೇಲೆ ಪ್ರವೇಶ ಪ್ರಕ್ರಿಯೆಗೆ ಸ್ಥಗಿತಗೊಂಡಿರುವ NEET-PG 2021 ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ದಾರಿ ಮಾಡಿಕೊಟ್ಟಿರುವುದು ಗಮನಾರ್ಹವಾಗಿದೆ.

ಆರ್ಥಿಕವಾಗಿ ದುರ್ಬಲ ವರ್ಗದ(ಇಡಬ್ಲ್ಯುಎಸ್) 8 ಲಕ್ಷ ವಾರ್ಷಿಕ ಆದಾಯದ ಮಾನದಂಡಗಳ ಅನ್ವಯದ ಕುರಿತು ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರ ಪೀಠವು ಮಧ್ಯಂತರ ಆದೇಶವನ್ನು ಜಾರಿಗೊಳಿಸಿ, ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆರಂಭಿಸಲು ತುರ್ತು ಅಗತ್ಯವಿದೆ ಎಂದು ಹೇಳಿದೆ..

ನೀಟ್-ಪಿಜಿ 2021 ಮತ್ತು NEET- UG 2021 ಆಧಾರದ ಮೇಲೆ ಕೌನ್ಸೆಲಿಂಗ್ ಅನ್ನು OBC(ಇತರ ಹಿಂದುಳಿದ ವರ್ಗ) ವರ್ಗಕ್ಕೆ 27 ಪ್ರತಿಶತ ಮೀಸಲಾತಿ ಸೇರಿದಂತೆ ಜುಲೈ 29, 2021 ದಿನಾಂಕದ ಸೂಚನೆಯ ಮೂಲಕ ಒದಗಿಸಲಾದ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ನಡೆಸಲಾಗುತ್ತದೆ.

ಜುಲೈ 29, 2021 ರಂದು ಒಬಿಸಿಗೆ ಶೇಕಡಾ 27 ಮತ್ತು ಇಡಬ್ಲ್ಯೂಎಸ್‌ಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಒದಗಿಸುವ ಕೇಂದ್ರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಸೂಚನೆಯನ್ನು ಪ್ರಶ್ನಿಸಿ ವೈದ್ಯರು ಸಲ್ಲಿಸಿದ ಅರ್ಜಿಗಳ ಬ್ಯಾಚ್‌ನ ಮೇಲೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...