alex Certify ಇಲ್ಲಿದೆ ನೀಟ್​ ಯುಜಿ – 2021ರ ಪ್ರವೇಶ ಪ್ರಮಾಣ ಪತ್ರ ಡೌನ್‌ ಲೋಡ್‌ ಮಾಡಿಕೊಳ್ಳುವ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೀಟ್​ ಯುಜಿ – 2021ರ ಪ್ರವೇಶ ಪ್ರಮಾಣ ಪತ್ರ ಡೌನ್‌ ಲೋಡ್‌ ಮಾಡಿಕೊಳ್ಳುವ ಮಾಹಿತಿ

2021ನೇ ಸಾಲಿನ ನೀಟ್​ ಯುಜಿ ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಸೆಪ್ಟೆಂಬರ್​ 9ರಂದು ಪ್ರವೇಶ ಪತ್ರವನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ನೀಟ್​ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್​ಸೈಟ್ ​neet.nta.nic.in.ನ ಮೂಲಕ ಪ್ರವೇಶ ಪ್ರಮಾಣ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

ನೀಟ್​ 2021 ಕೈಪಿಡಿಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ ಮೂರು ದಿನಕ್ಕೆ ಮುಂಚಿತವಾಗಿ ಅಭ್ಯರ್ಥಿಗಳಿಗೆ ಪ್ರವೇಶ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

2021ರ ನೀಟ್​ ಯುಜಿ ಪರೀಕ್ಷೆಯು ಸೆಪ್ಟೆಂಬರ್​ 12ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಅದೇ ರೀತಿ ನೀಟ್​ ಪಿಜಿ ಪರೀಕ್ಷೆಯು ಸೆಪ್ಟೆಂಬರ್​ 11ರಂದು ನಡೆಯಲಿದೆ.

ನೀಟ್​ ಯುಜಿ ಪ್ರವೇಶ ಪ್ರಮಾಣ ಪತ್ರ ಡೌನ್​ಲೋಡ್​ ಮಾಡುವ ವಿಧಾನ :

ಅಧಿಕೃತ ನೀಟ್​ 2021 ವೆಬ್​ಸೈಟ್​ಗೆ ಭೇಟಿ ನೀಡಿ.

ಹೋಮ್ ​ಪೇಜ್​ನಲ್ಲಿ ನೀಟ್​ ಯುಜಿ ಪ್ರವೇಶಪತ್ರ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

ಈಗ ಕಾಣಿಸುವ ಲಾಗಿನ್​ ಪೇಜ್​ನಲ್ಲಿ ಕೇಳಲಾಗುವ ಮಾಹಿತಿಯನ್ನು ಒದಗಿಸಿ.

ನೀಟ್​ ಯುಜಿ ಪ್ರವೇಶ ಪ್ರಮಾಣ ಪತ್ರವು ಪರದೆ ಮೇಲೆ ಕಾಣಿಸಲಿದೆ.

ಇದನ್ನು ಸೇವ್​ ಮಾಡಿ ಹಾಗೂ ಪ್ರಿಂಟ್​ ತೆಗೆದಿಟ್ಟುಕೊಳ್ಳಿ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...