alex Certify ನೀಟ್ ಪತ್ರಿಕೆ ಲೀಕ್ ಆಗಿದ್ದು ನಿಜವೇ….? ಅಧಿಕಾರಿಗಳು ನೀಡಿದ್ದಾರೆ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀಟ್ ಪತ್ರಿಕೆ ಲೀಕ್ ಆಗಿದ್ದು ನಿಜವೇ….? ಅಧಿಕಾರಿಗಳು ನೀಡಿದ್ದಾರೆ ಈ ಮಾಹಿತಿ

ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ಸೀಟುಗಳ ಆಯ್ಕೆಗಾಗಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನೀಟ್ 2021ರ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಸುದ್ದಿ ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡಿದೆ.

ಒಂದು ಸುದ್ದಿ ಚಾನೆಲ್ ವರದಿ ಪ್ರಸಾರ ಮಾಡಿದ ನಂತರ ಚರ್ಚೆಗಳು ನಡೆದವು, ಆದಾಗ್ಯೂ, ಯಾವುದೇ ವರದಿಗಳಲ್ಲಿ ಪ್ರಸ್ತಾಪವಾದ ಪ್ರಶ್ನೆಪತ್ರಿಕೆ ಮುಂಬರುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಾಗಿರಲಿಲ್ಲ ಎಂಬುದು ಖಚಿತವಾಗಿದೆ.

ಪ್ರಶ್ನೆಪತ್ರಿಕೆ ವಿಚಾರದಲ್ಲಿ ಯಾವುದೇ ದೂರುಗಳನ್ನು ಸ್ವೀಕರಿಸಲಿಲ್ಲ ಮತ್ತು ಇವು ವದಂತಿಗಳು ಎಂದು ಅಧಿಕಾರಿಗಳು ಹೇಳಿದ್ದಾರೆ. “ಇದು ಸುಳ್ಳುಸುದ್ದಿ. ಇಂತಹ ಸುದ್ದಿಯನ್ನು ನಂಬಬೇಡಿ ಎಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ”, ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಅಕ್ರಮ ಅಥವಾ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...