ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಬಂಗಾರದ ಹುಡುಗ ನೀರಜ್ ಚೋಪ್ರಾ ಎಸೆದಿದ್ದ ಜಾವೆಲಿನ್, ಅಯೋಧ್ಯೆ ಶ್ರೀರಾಮ ಮಂದಿರದ ತದ್ರೂಪು ವಿನ್ಯಾಸದ ಪುಟ್ಟ ಮಂದಿರ, ಪಿ.ವಿ. ಸಿಂಧು ಅವರು ಕಂಚಿನ ಪದಕ ಗೆಲ್ಲಲು ಬಳಸಿದ ಬ್ಯಾಡ್ಮಿಂಟನ್ ರ‍್ಯಾಕೆಟ್ ಸೇರಿದಂತೆ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂದಿರುವ ಉಡುಗೊರೆಗಳು, ಸ್ಮರಣಿಕೆಗಳು ಹರಾಜಿಗೆ ಇರಿಸಲಾಗಿದೆ.
ಇದನ್ನೆಲ್ಲ ಮಾರಾಟ ಮಾಡಬೇಕಾ ಎಂದು ಹೌಹಾರುವ ಮುನ್ನ ಪೂರ್ತಿ ಮಾಹಿತಿ ಕೇಳಿರಿ.
ದೇಶದ ಅತಿ ಪವಿತ್ರ ನದಿ, ಹೆಮ್ಮೆಯ ನದಿಯಾದ ಗಂಗೆಯ ಸ್ವಚ್ಛತೆಗೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ’ನಮಾಮಿ ಗಂಗೆ’ ಸ್ವಚ್ಛತಾ ಯೋಜನೆಗೆ ಈ ಹರಾಜಿನಲ್ಲಿ ಸಂಗ್ರಹವಾಗುವ ಹಣವನ್ನು ಬಳಸಲಾಗುತ್ತಿದೆ.
ಮಾಲಿನ್ಯ ರಹಿತ ಶುದ್ಧ ಗಂಗೆ ದೇಶದಲ್ಲಿ ಹರಿಯಲಿ. ಆ ಮೂಲಕ ನಮ್ಮ ಸಂಸ್ಕೃತಿಯ ಜೀವನಾಡಿಯೊಂದು ಸಮೃದ್ಧಗೊಳ್ಳಲಿ ಎಂಬ ಸದುದ್ದೇಶವನ್ನು ಹರಾಜು ಪ್ರಕ್ರಿಯೆ ಹೊಂದಿದೆ.
‘ಡ್ಯಾನ್ಸ್ ದಿವಾನೆ-3’ಯಲ್ಲಿ ಭಾವುಕರಾಗಿ ಕಣ್ಣೀರಿಟ್ಟ ನಿರ್ದೇಶಕ ರೋಹಿತ್ ಶೆಟ್ಟಿ: ಕಾರಣವೇನು ಗೊತ್ತಾ….?
ಹಾಗಾದರೆ, ನೀವು ಕೂಡ ಹರಾಜಿನಲ್ಲಿ ಭಾಗಿಯಾಗಿ ಖರೀದಿ ಮಾಡಲು ಬಯಸುತ್ತೀರಾ? ಅಲ್ಲಿಗೆ, ನೀವು ಮಾಡಬೇಕಿರುವುದು https://pmmementos.gov.in ವೆಬ್‌ಸೈಟ್‌ಗೆ ಭೇಟಿ ನೀಡುವುದು. ಇಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಇ-ಹರಾಜಿನಲ್ಲಿ ಬಿಡ್ ಮಾಡಲು ಅವಕಾಶ ಪಡೆಯಬಹುದು. ಅತಿ ಹೆಚ್ಚು ಮೊತ್ತ ಬಿಡ್ ಮಾಡಿದವರಿಗೆ ಅಪರೂಪದ ವಸ್ತುಗಳು ಸಿಗಲಿವೆ.
2014ರ ಜೂನ್‌ನಲ್ಲಿ ನಮಾಮಿ ಗಂಗೆ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರವು, ಅದಕ್ಕಾಗಿ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಪಶ್ಚಿಮ ಹಿಮಾಲಯದಲ್ಲಿ ಉದ್ಭವಿಸುವ ಗಂಗಾ ನದಿಯು ಉತ್ತರಾಖಂಡ, ರಿಷಿಕೇಶ್, ಹರಿದ್ವಾರ, ವಾರಾಣಸಿ, ಪ್ರಯಾಗರಾಜ್, ಪಟನಾ, ಕೋಲ್ಕೊತಾ, ಕಾನ್ಪುರ, ಘಾಜಿಪುರ ಸೇರಿದಂತೆ ಒಟ್ಟು 2,510 ಕಿ.ಮೀ. ಉದ್ದನೆಯ ಪ್ರದೇಶವನ್ನು ಭಾರತದಲ್ಲಿ ಕ್ರಮಿಸುತ್ತದೆ. ಕೊನೆಯಲ್ಲಿ ಬಾಂಗ್ಲಾದೇಶದಲ್ಲೂ ಹರಿದು ಬಂಗಾಳ ಕೊಲ್ಲಿ ಸಾಗರ ಸೇರುತ್ತದೆ.