ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಮರಳಿದ ನೀರಜ್ ಚೋಪ್ರಾಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ಈ ವೇಳೆ ಚೋಪ್ರಾ ಜೊತೆಗೆ ಭಾರತದ ಇತರ ಅಥ್ಲೀಟ್ಗಳನ್ನು ಸಹ ಭರ್ಜರಿ ಸ್ವಾಗತ ಕೋರಿ ಸ್ವಾಗತಿಸಲಾಯಿತು. ಅಥ್ಲೀಟ್ ಗಳನ್ನು ನೋಡಲು ವಿಮಾನ ನಿಲ್ದಾಣಕ್ಕೆ ಸಾವಿರಾರು ಮಂದಿ ಆಗಮಿಸಿದ್ದರು.
ಆ ನಗರದಲ್ಲಿಲ್ಲ ಒಂದೇ ಒಂದು ರಸ್ತೆ….! ಪ್ರಪಂಚದ ವಿಚಿತ್ರ ನಗರಗಳ ವಿವರ ಇಲ್ಲಿದೆ
“ಭಾರತ್ ಮಾತಾ ಕೀ ಜೈ” ಘೋಷಗಳೊಂದಿಗೆ ಅಥ್ಲೀಟ್ಗಳನ್ನು ಜನರು ಬರಮಾಡಿಕೊಂಡಿದ್ದಾರೆ.
ಕಂಚಿನ ಪದಕ ಜಯಿಸಿದ ಭಾರತದ ಹಾಕಿ ತಂಡ, ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿ ದಹಿಯಾ ಹಾಗೂ ಕಂಚಿನ ಪದಕ ವಿಜೇತ ಭಜರಂಗ್ ಪೂನಿಯಾರನ್ನೂ ಇದೇ ವೇಳೆ ಭಾರೀ ಕರತಾಡನದೊಂದಿಗೆ ಬರಮಾಡಿಕೊಳ್ಳಲಾಯಿತು.