ಮಕ್ಕಳು ಮಾಡುವ ಪ್ರಯೋಗಗಳು ದೊಡ್ಡ ಯಡವಟ್ಟಿಗೆ ಕಾರಣವಾಗುತ್ತವೆ. ಇದಕ್ಕೆ ಇರಾನ್ ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. ಇರಾಕ್ ನಲ್ಲಿ 10 ವರ್ಷದ ಬಾಲಕ, ಖಾಸಗಿ ಅಂಗಕ್ಕೆ ಸೂಜಿ ಹಾಕಿಕೊಂಡಿದ್ದಾನೆ.
ಪಾಲಕರು ಆತನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಎಕ್ಸ್ ರೇ ವೇಳೆ, ದೇಹದಲ್ಲಿ 9 ಸೆಂ.ಮೀಟರ್ ಉದ್ದದ ಸೂಜಿ ಇರುವುದು ಪತ್ತೆಯಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಸೂಜಿಯನ್ನು ಹೊರಗೆ ತೆಗೆದಿದ್ದಾರೆ.
ನೊಣ ಓಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ಡೆಲಿವರಿ ಬಾಯ್…!
ದೇಹದ ಸೂಕ್ಷ್ಮ ಭಾಗದಲ್ಲಿ ಅಂಟಿಕೊಂಡಿದ್ದ ಸೂಜಿಯನ್ನು ಸುಲಭವಾಗಿ ತೆಗೆಯಲು ಸಾಧ್ಯವಿರಲಿಲ್ಲ. ಮಗು ಚಿಕ್ಕದಾಗಿದ್ದರಿಂದ ಎಚ್ಚರಿಕೆ ವಹಿಸಬೇಕಾಗಿತ್ತು. ಮೂರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ, ವೈದ್ಯರು ಖಾಸಗಿ ಭಾಗದಲ್ಲಿ ಸಿಲುಕಿದ್ದ ಸೂಜಿಯನ್ನು ತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಪ್ರಕಾರ, ಮಗು ಖಾಸಗಿ ಭಾಗದಲ್ಲಿದ್ದ ಸೂಜಿ ಒಳಕ್ಕೆ ಹೋಗಿದೆ. ಸೂಜಿ ಹೇಗೆ ಒಳಗೆ ಹೋಯ್ತು ಎಂಬುದು ಗೊತ್ತಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಜರ್ನಲ್ ಆಫ್ ಯೂರಾಲಜಿ ಕೇಸ್ ರಿಪೋರ್ಟ್ಸ್ ನಲ್ಲಿ ಪ್ರಕಟಿಸಲಾದ ವರದಿ ಪ್ರಕಾರ, ಇದು ಅತ್ಯಂತ ಅಪರೂಪ. ಮಗುವಿಗೆ ಚಿಕಿತ್ಸೆ ನೀಡಿದ ಶಾಹಿದ್ ಸದೋಗಿ ವಿಶ್ವವಿದ್ಯಾಲಯದ ಮುಖ್ಯ ಮೂತ್ರಶಾಸ್ತ್ರಜ್ಞ ಸೆರಜೋಡಿನ್ ವಾಹಿದಿ ಪ್ರಕಾರ, ಖಾಸಗಿ ಭಾಗದಲ್ಲಿ ಸಿಲುಕಿರುವ ಚೂಪಾದ ವಸ್ತುವನ್ನು ಯಶಸ್ವಿಯಾಗಿ ತೆಗೆಯುವುದು ಕಷ್ಟವೆಂದಿದ್ದಾರೆ.
BIG NEWS: ಸಚಿನ್, ಅಂಬಾನಿ ಸೇರಿ ಅನೇಕ ದಿಗ್ಗಜರ ಕುರಿತಾದ ಸ್ಪೋಟಕ ಮಾಹಿತಿ ಬಹಿರಂಗ
ಇತ್ತೀಚಿನ ದಿನಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗ್ತಿವೆ. 15 ವರ್ಷದ ಹುಡುಗ ತನ್ನ ಖಾಸಗಿ ಭಾಗದಲ್ಲಿ ಯುಎಸ್‌ಬಿ ಕೇಬಲ್ ಹಾಕಿಕೊಂಡಿದ್ದ. ನೇಪಾಳದ ವ್ಯಕ್ತಿ, ತನ್ನ ಖಾಸಗಿ ಭಾಗವನ್ನು ನೀರಿನ ಬಾಟಲಿಯಲ್ಲಿ ಸಿಕ್ಕಿಹಾಕಿಸಿಕೊಂಡಿದ್ದ.