alex Certify BIG NEWS: ಸಚಿನ್, ಅಂಬಾನಿ ಸೇರಿ ಅನೇಕ ದಿಗ್ಗಜರ ಕುರಿತಾದ ಸ್ಪೋಟಕ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಚಿನ್, ಅಂಬಾನಿ ಸೇರಿ ಅನೇಕ ದಿಗ್ಗಜರ ಕುರಿತಾದ ಸ್ಪೋಟಕ ಮಾಹಿತಿ ಬಹಿರಂಗ

ನವದೆಹಲಿ: ಪನಾಮ ಪೇಪರ್ಸ್ ರೀತಿಯಲ್ಲೇ ಪಂಡೋರಾ ಪೇಪರ್ಸ್ ನಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ಅನಿಲ್ ಅಂಬಾನಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಪತಿ ಸೇರಿ ಅನೇಕರ ತೆರಿಗೆ ವಂಚನೆಗೆ ಸಂಬಂಧಿಸಿದ ಮಾಹಿತಿ ಬಹಿರಂಗವಾಗಿದೆ.

ಪಂಡೋರಾ ಪೇಪರ್ಸ್ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದ್ದು, ಇದರಲ್ಲಿ ಸಾವಿರಾರು ಶ್ರೀಮಂತರು ವಿದೇಶದಲ್ಲಿ ಕಂಪನಿಗಳನ್ನು ಆರಂಭಿಸಿದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ, ಈಕ್ವೆಡಾರ್ ರಾಷ್ಟ್ರಪತಿ, ಜೋರ್ಡಾನ್ ರಾಜ, ಶಕೀರಾ ಸೇರಿದಂತೆ ಅನೇಕರ ಮಾಹಿತಿ ಇದ್ದು, 300 ಭಾರತೀಯರ ಮಾಹಿತಿ ಕೂಡ ಇದೆ.

ಒಂದು ರೂಪಾಯಿಯ ಈ ನೋಟು ನಿಮ್ಮ ಬಳಿ ಇದ್ದರೆ ಸಿಗುತ್ತೆ 45,000 ರೂ.

ಸಚಿನ್ ತೆಂಡೂಲ್ಕರ್ ವಿದೇಶದಲ್ಲಿನ ತಮ್ಮ ಆಸ್ತಿಯನ್ನು ನಗದೀಕರಣ ಮಾಡಲು 2016ರಲ್ಲಿ ಪನಾಮ ಪೇಪರ್ ಬಹಿರಂಗವಾದ ನಂತರ ಮನವಿ ಮಾಡಿದ್ದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ದಿವಾಳಿ ಎಂದು ಘೋಷಿಸಲಾದ ಉದ್ಯಮಿ ಅನಿಲ್ ಅಂಬಾನಿ ತೆರಿಗೆ ವಂಚನೆಗೆ ನೆರವಾಗುವ ದೇಶಗಳಲ್ಲಿ 18 ಕಂಪನಿಗಳನ್ನು ಹೊಂದಿರುವುದಾಗಿ ಮಾಹಿತಿ ನೀಡಲಾಗಿದೆ.

ರೇಷನ್ ಕಾರ್ಡ್ ಹೊಂದಿದ ಎಲ್ಲ ಸದಸ್ಯರಿಗೆ ಇ-ಕೆವೈಸಿ ಕಡ್ಡಾಯ, ಅ. 10 ರವರೆಗೆ ಕೊನೆ ಅವಕಾಶ

117 ದೇಶಗಳಲ್ಲಿ 600 ಕ್ಕೂ ಹೆಚ್ಚು ಪತ್ರಕರ್ತರನ್ನು ಒಳಗೊಂಡ ತನಿಖೆಯನ್ನು ಸಂಘಟಿಸಲು ಐಸಿಐಜೆ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿತು, ಇದು ಅತಿದೊಡ್ಡ ಪತ್ರಿಕೋದ್ಯಮ ಪಾಲುದಾರಿಕೆಯಾಗಿದೆ. 2016 ರಲ್ಲಿ ಜಗತ್ತನ್ನು ತಲ್ಲಣಗೊಳಿಸಿದ ಪನಾಮ ಪೇಪರ್ಸ್‌ಗಾಗಿ, 80 ದೇಶಗಳ ಸುಮಾರು 400 ಪತ್ರಕರ್ತರು ತನಿಖೆಯಲ್ಲಿ ಭಾಗವಹಿಸಿದ್ದರು.

ವರದಿಗಳ ಪ್ರಕಾರ, ಪಂಡೋರಾ ಪೇಪರ್ಸ್ ಸೋರಿಕೆಯು ಪನಾಮಾ ಪೇಪರ್‌ಗಳಿಗಿಂತ ಹೆಚ್ಚಿನ ನಾಯಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಆರ್ಥಿಕ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ. ಕಡಲಾಚೆಯ ಕಂಪನಿಗಳ ಮಾಲೀಕತ್ವದ ಬಗ್ಗೆ ಎರಡು ಪಟ್ಟು ಹೆಚ್ಚು ಮಾಹಿತಿಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...