alex Certify ಬೆಚ್ಚಿಬೀಳಿಸುತ್ತೆ ವರ್ಷವೊಂದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತವರ ಸಂಖ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ವರ್ಷವೊಂದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತವರ ಸಂಖ್ಯೆ…!

ನವದೆಹಲಿ: ಸರ್ಕಾರಗಳು ಎಷ್ಟೇ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ್ದರೂ ಅಪಘಾತಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ದುರ್ಮರಣಗಳು ಸಾಮಾನ್ಯ ಎನ್ನುವಂತಾಗಿ ಬಿಟ್ಟಿದೆ.

ಒಂದೇ ವರ್ಷದಲ್ಲಿ ಅದೂ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್ ಪ್ರೆಸ್ ರಸ್ತೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದ್ದು, ಆ ಸಂಖ್ಯೆ ಕೇಳಿದರೇನೇ ಪ್ರತಿಯೊಬ್ಬರ ಎದೆ ಝಲ್ ಅನ್ನಿಸದೆ ಇರದು.

2020ರಲ್ಲಿ ಎಕ್ಸ್ ಪ್ರೆಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ. ಅಂಕಿ – ಅಂಶಗಳ ಪ್ರಕಾರ ಒಂದೇ ವರ್ಷದಲ್ಲಿ 47,984 ಜನರು ದೇಶದಲ್ಲಿ ಪ್ರಾಣ ಚೆಲ್ಲಿದ್ದಾರೆ.

ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ಈ ಮಾಹಿತಿ ನೀಡಿದ ಅವರು, 2019ರ ವರ್ಷಕ್ಕೆ ಹೋಲಿಸಿದರೆ, 2020ರ ಅಂಕಿ – ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 2019ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 53,872 ಜನರು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.

ಡ್ರಿಂಕ್ ಆಂಡ್ ಡ್ರೈವಿಂಗ್, ರಸ್ತೆಗಳ ಸ್ಥಿತಿ, ಅತಿ ವೇಗ, ಮೊಬೈಲ್ ಬಳಕೆಯೇ ಇಂತಹ ಅಪಘಾತಗಳಿಗೆ ಕಾರಣ ಎಂದು ಹೇಳಿದ್ದಾರೆ. ಹೀಗಾಗಿ ಸರ್ಕಾರವು ತಜ್ಞರ ನಿರ್ದೇಶನದಲ್ಲಿ ಹಲವು ಕಠಿಣ ಮಾರ್ಗಸೂಚಿಗಳನ್ನು ಕೂಡ ನೀಡಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...