alex Certify NCB ಅಧಿಕಾರಿಗಳಿಂದ ಭರ್ಜರಿ ಬೇಟೆ: ಅಲ್ಪಾಜೋಲಂ ಲ್ಯಾಬ್ ಮೇಲೆ ದಾಳಿ, ಐವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NCB ಅಧಿಕಾರಿಗಳಿಂದ ಭರ್ಜರಿ ಬೇಟೆ: ಅಲ್ಪಾಜೋಲಂ ಲ್ಯಾಬ್ ಮೇಲೆ ದಾಳಿ, ಐವರು ಅರೆಸ್ಟ್

ಅಲ್ಪಾಜೋಲಂ ತಯಾರಿಸುತ್ತಿದ್ದ ಪ್ರಯೋಗಾಲಯದ ಮೇಲೆ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ಉಪವಲಯ ತಂಡದಿಂದ ದಾಳಿ ನಡೆಸಲಾಗಿದೆ.

ಎನ್.ಸಿ.ಬಿ. ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದು, ಅಲ್ಪಾಜೋಲಂ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಸುಧಾಕರ್, ನರೇಶ್ ಕೆ.ಪಿ., ಕುಮಾರ್, ಶ್ರೀಕಾಂತ್ ಮತ್ತು ಪ್ರಾಮಾರ್ಥಿ ಎಂಬುವರನ್ನು ಬಂಧಿಸಲಾಗಿದೆ.

ಮೇದಕ್ -ಹೈದರಾಬಾದ್ ರಸ್ತೆಯಲ್ಲಿ ಮಾರಾಟ ಮಾಡುವಾಗ ದಾಳಿ ನಡೆಸಲಾಗಿದೆ. ಬಂಧಿತರಿಂದ 3.25 ಕೆಜಿ ಅಲ್ಪಾಜೋಲಂ, 2 ಕಾರು ಹಾಗೂ 12.75 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ. ಅಲ್ಪ್ರಜಾಲಂ ತಯಾರಿಕೆಗೆ ಬಳಸುತ್ತಿದ್ದ ಕಚ್ಚಾವಸ್ತು ಜಪ್ತಿ ಮಾಡಲಾಗಿದೆ.

ಹೈದರಾಬಾದ್ ಬಾಲಾನಗರದಲ್ಲಿರುವ ಅಲ್ಪಾಜೋಲಂ ತಯಾರಿಸುತ್ತಿದ್ದ ಲ್ಯಾಬೋರೇಟರಿ ಮೇಲೆ ದಾಳಿ ನಡೆಸಿ ಮೇಲುಸ್ತುವಾರಿಯಾಗಿದ್ದ ಪಾಮಾರ್ಥಿಯನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...