ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆಯ ಸಂಭ್ರಮ ಮುಗಿದಿದ್ದರೂ ಮಹಾರಾಷ್ಟ್ರದಲ್ಲಿ ಮಾತ್ರ ಎರಡು ವಾರಗಳ ಮಟ್ಟಿಗೆ ಫುಲ್ ಹಬ್ಬ. ಗಣೇಶೋತ್ಸವದ ಅಂತಿಮ ದಿನ ಗಣೇಶ ಮೂರ್ತಿಯ ಉತ್ಸವ ಅದೆಷ್ಟು ವಿಜೃಂಭಣೆಯಿಂದ ಸಾಗುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ?
ಇಂಥ ಸುಸಂದರ್ಭದಲ್ಲಿ ಗಣೇಶನಿಗೆ ಇಷ್ಟವಾದ ಮೋದಕಕ್ಕೆ ಚಿನ್ನದ ಮೆರುಗು ಕೊಟ್ಟಿರುವ ನಾಸಿಕ್‌ನ ಸಿಹಿ ಅಂಗಡಿಯೊಂದು ತನ್ನ ಗ್ರಾಹಕರಿಗೆ ’ಸುವರ್ಣಾವಕಾಶ’ವೊಂದನ್ನು ಕೊಟ್ಟಿದೆ.
ಗಣೇಶ ಚತುರ್ಥಿಯ ಸಿಹಿ ಹೆಚ್ಚಿಸಲು ಬಂದಿದ್ದಾನೆ ಚಾಕ್ಲೇಟ್ ವಿಘ್ನೇಶ್ವರ
’ಸಾಗರ್ ಸ್ವೀಟ್ಸ್’ ಹೆಸರಿನ ಈ ಅಂಗಡಿಯು ಚಿನ್ನದ ಮೋದಕಗಳನ್ನು ತಯಾರಿಸಿದ್ದು, ಕಿಲೋಗೆ 12,000 ರೂ.ನಂತೆ ಮಾರಾಟ ಮಾಡುತ್ತಿದೆ. ಚಿನ್ನ ಲೇಪಿತ ಈ ಮೋದಕಗಳ ಚಿತ್ರಗಳು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿವೆ.
“ನಮಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ 25 ವಿವಿಧ ಬಗೆಯ ಮೋದಕಗಳನ್ನು ತಯಾರಿಸಿದ್ದೇವೆ. ನಾವು ಉತ್ತಮ ಮಾರಾಟ ಕಾಣುತ್ತಿದ್ದೇವೆ” ಎಂದು ಸಾಗರ್ ಸ್ವೀಟ್ಸ್‌ನ ದೀಪಕ್ ಚೌಧರಿ ತಿಳಿಸಿದ್ದಾರೆ.