alex Certify ʼಗಣಪತಿʼ ಪೂಜೆ ಮಾಡುವ ಮುನ್ನ ಇರಲಿ ಈ ಬಗ್ಗೆ ಗಮನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗಣಪತಿʼ ಪೂಜೆ ಮಾಡುವ ಮುನ್ನ ಇರಲಿ ಈ ಬಗ್ಗೆ ಗಮನ….!

ಯಾವುದೇ ಶುಭ ಕಾರ್ಯಗಳ ಆರಂಭದಲ್ಲಿ ಮೊದಲು ಗಣೇಶನನ್ನು ಆರಾಧನೆ ಮಾಡಲಾಗುತ್ತದೆ. ಗಣೇಶನನ್ನು ಶುಭ ಹಾಗೂ ಮಂಗಳಕರವೆಂದು ಪರಿಗಣಿಸಲಾಗಿದೆ. ಗಣೇಶನ ಪೂಜೆಯಿಂದ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ. ವಾಸ್ತುಶಾಸ್ತ್ರದಲ್ಲಿಯೂ ಗಣೇಶನಿಗೆ ಪ್ರಾಮುಖ್ಯತೆ ನೀಡಲಾಗಿದೆ.

ಮನೆಯಲ್ಲಿ ಗಣೇಶ ಸ್ಥಾಪನೆ ವೇಳೆ ನೀವು ತಪ್ಪು ಮಾಡಿದ್ರೆ ಶುಭ ಫಲಗಳು ಅಶುಭ ಫಲವಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ಭಗವಂತ ಗಣೇಶನ ಪ್ರತಿಮೆ ಸ್ಥಾಪನೆ ಮಾಡುವ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನವಿಡಿ.

ಪ್ರತಿ ದಿನ ಗಣೇಶನ ಈ ʼಮೂರ್ತಿʼಗೆ ಮಾಡಿ ಪೂಜೆ

ಭಗವಂತ ಗಣೇಶನ ಮುಖ ದಕ್ಷಿಣ ದಿಕ್ಕಿಗಿರದಂತೆ ನೋಡಿಕೊಳ್ಳಿ. ಇದು ಅಂಗಡಿ ಹಾಗೂ ಕಚೇರಿ ವ್ಯವಹಾರದ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ. ಮನೆಯಲ್ಲಿ ಕುಳಿತ ಭಂಗಿಯಲ್ಲಿ ಹಾಗೂ ಕಚೇರಿಯಲ್ಲಿ ನಿಂತ ಭಂಗಿಯಲ್ಲಿರುವ ಗಣೇಶನನ್ನು ಸ್ಥಾಪಿಸಿ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಬೇಡಿ. ಇದ್ರಿಂದ ಅಶುಭ ಪ್ರಾಪ್ತಿಯಾಗುತ್ತದೆ.

ಎಡಮುರಿ ಗಣೇಶ ಮೂರ್ತಿಯನ್ನು ಮನೆಯಲ್ಲಿ ಸ್ಥಾಪನೆ ಮಾಡಿ. ಬಲಮುರಿ ಗಣೇಶ ಮೂರ್ತಿ ಪೂಜೆಯಿಂದ ಪ್ರತಿಫಲ ಸಿಗೋದು ನಿಧಾನ.

ಗಣೇಶನಿಗೆ ತುಳಸಿಯನ್ನು ಅರ್ಪಿಸಬೇಡಿ. ತುಳಸಿ ವಿವಾಹದ ಪ್ರಸ್ತಾವನೆಯನ್ನು ಗಣೇಶ ತಿರಸ್ಕರಿಸಿದ್ದ. ತುಳಸಿ ಗಣೇಶನಿಗೆ ಎರಡು ಮದುವೆಯ ಶಾಪ ನೀಡಿದ್ದಳು.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...