
ಅಮೆರಿಕದ ನಾಸಾ ಹಾಗೂ ರಾಷ್ಟ್ರೀಯ ಸಾಗರಿಕ ಮತ್ತು ವಾತಾವರಣ ಆಡಳಿತ (ಎನ್ಓಎಎ) ಕಳೆದ 14 ವರ್ಷಗಳ (2005-2019) ಅವಧಿಯಲ್ಲಿ ನಡೆಸಿದ ಅಧ್ಯಯನವೊಂದರಿಂದ ಭೂಮಿ ಮೇಲೆ ಶಾಖ ಹೆಚ್ಚುವ ದರ ದುಪ್ಪಟ್ಟಾಗಿದೆ ಎಂದು ತಿಳಿದುಬಂದಿದೆ.
ಇದೇ ರೀತಿಯಲ್ಲಿ ಸಮತೋಲನ ಹಾಳಾಗುವುದು ಮುಂದಿನ ಕೆಲವೊಂದು ದಶಕಗಳ ಕಾಲ ಮುಂದುವರೆದರೆ, ಅದರಿಂದ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ವಾತಾವರಣದಲ್ಲಿ ಬದಲಾವಣೆ ಕಂಡುಬರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: ಐಟಿ ಪೋರ್ಟಲ್ ತೊಂದರೆ ನಿವಾರಣೆ
ಅಧ್ಯಯನದ ಪ್ರಕಾರ; ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತಿರುವ ಹಸಿರು ಮನೆ ಅನಿಲಗಳ ಪರಿಣಾಮ ಹೀಗೆ ಭೂಮಿ ಮೇಲಿನ ಶಾಖ ಹೆಚ್ಚಾಗುವ ದರದಲ್ಲಿ ಏರಿಕೆಯಾಗುತ್ತಿದೆ. ಹೆಚ್ಚುವರಿಯಾಗಿ, ಭೂಮಿಯ ವಾತಾವರಣದಲ್ಲಿ ನೀರಾವಿ ಪ್ರಮಾಣ ಹೆಚ್ಚಾಗಿರುವ ಪರಿಣಾಮ ಸೂರ್ಯನಿಂದ ಭೂಮಿ ಮೇಲೆ ಬೀಳುತ್ತಿರುವ ಸೂರ್ಯನ ಶಾಖವನ್ನು ಪ್ರತಿಫಲಿಸುವ ಬದಲಿಗೆ ಭೂಮಿಯೇ ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ. ಸಮುದ್ರದ ಮೇಲಿನ ಹಿಮಗಡ್ಡೆ ಕರಗುತ್ತಿರುವುದು ಹಾಗೂ ಮೋಡಗಳು ಕ್ಷೀಣಿಸುತ್ತಿರುವುದು ಸೂರ್ಯನಿಂದ ಬರುತ್ತಿರುವ ಶಾಖದ ಶಕ್ತಿಯ ಹೀರಿಕೆಯನ್ನೂ ಸಹ ಹೆಚ್ಚಿಸಿದೆ.