ಅಮೆರಿಕದ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಭೂಮಿಯಿಂದ 390 ಜ್ಯೋತಿರ್ವರ್ಷ ದೂರವಿರುವ Z 229-15 ಎಂಬ ವಸ್ತುವೊಂದನ್ನು ಪತ್ತೆ ಮಾಡಿದೆ. ಈ ವಸ್ತುವನ್ನು ಲೈರಾ ಹೆಸರಿನ ನಕ್ಷತ್ರಪುಂಜದಲ್ಲಿ ಕಾಣಬಹುದಾಗಿದೆ.
“ಆಕಾಶ ವಸ್ತುಗಳ ಮೇಲೆ ಆಸಕ್ತಿ ಇರುವ ಮಂದಿಗೆ Z 229-15 ಬಹಳ ಆಸಕ್ತಿದಾಯಕ ವಿಚಾರವಾಗಿದೆ. ಕೆಲವೊಮ್ಮೆ ಸಕ್ರಿಯ ಕ್ಷೀರಪಥದ ಕೇಂದ್ರವಾಗಿ, ಕೆಲವೊಮ್ಮೆ ಕ್ವಾಸರ್ ಆಗಿ ಮತ್ತು ಕೆಲವೊಮ್ಮೆ ಸೇಫರ್ಟ್ ಗ್ಯಾಲಾಕ್ಷಿ ಆಗಿ Z 229-15 ಅಧ್ಯಯನ ನಡೆಸಲು ಬಹಳಷ್ಟು ಆಸಕ್ತಿ ಮೂಡಿಸುತ್ತದೆ,” ಎಂದು ನಾಸಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿದು ಬಂದಿದೆ.
ಸುರುಳಿಯಾಕಾರಾ ಗ್ಯಾಲಾಕ್ಷಿಯನ್ನು ಈ ಚಿತ್ರ ತೋರುತ್ತಿದೆ. ನಾಸಾ ಪ್ರಕಾರ ಈ ಗ್ಯಾಲಾಕ್ಸಿಗೆ ಎರಡು ನೇರ ಕೈಗಳಿದ್ದು, ಅವುಗಳು ಕೇಂದ್ರ ಭಾಗದಿಂದ ಬಂದಿವೆ. ಎರಡು ದಿನಗಳ ಹಿಂದೆ ಶೇರ್ ಮಾಡಲಾದ ಈ ಚಿತ್ರವನ್ನು ಒಂದು ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ.