ನಾಸಾದ ಹಳೆಯ ಉಪಗ್ರಹ ರುವೆನ್ ರಾಮಟಿ ಹೈ ಎನರ್ಜಿ ಸೋಲಾರ್ ಸ್ಪೆಕ್ಟ್ರೋಸ್ಕೋಪಿಕ್ ಇಮೇಜರ್ (RHESSI) ಉಡಾವಣೆಯಾದ ಸುಮಾರು 21 ವರ್ಷಗಳ ನಂತರ ಬುಧವಾರ (ಏಪ್ರಿಲ್ 19) ಭೂಮಿಯನ್ನ ಅಪ್ಪಳಿಸಲಿದೆ.
21 ವರ್ಷದ ಹಳೆಯ ಉಪಗ್ರಹ ವಾತಾವರಣವನ್ನು ಮರುಪ್ರವೇಶಿಸುವಾಗ ಮಾನವರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ನಾಸಾ ಸಂಸ್ಥೆ ಹೇಳಿದೆ.
2002 ರಲ್ಲಿ ಉಡಾವಣೆಯಾದ RHESSI, ಸೌರ ಜ್ವಾಲೆಗಳು ಮತ್ತು ಅದರ ಲೋ ಅರ್ಥ್ ಆರ್ಬಿಟ್ ಕರೋನಲ್ ದ್ರವ್ಯರಾಶಿಯ ಹೊರಸೂಸುವಿಕೆಯ ಮಾಹಿತಿ ರವಾನಿಸುತ್ತಿತ್ತು. 16 ವರ್ಷಗಳ ನಂತರ ಸಂವಹನ ತೊಂದರೆಗಳಿಂದಾಗಿ NASA 2018 ರಲ್ಲಿ ಇದನ್ನು ರದ್ದುಗೊಳಿಸಿತು.
ಉಪಗ್ರಹದ ಮೇಲೆ ನಿಗಾ ವಹಿಸುತ್ತಿರುವ ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್, 660-ಪೌಂಡ್ ಬಾಹ್ಯಾಕಾಶ ನೌಕೆಯು ಸರಿಸುಮಾರು ಭಾರತೀಯ ಕಾಲಮಾನ ಬೆಳಗ್ಗೆ 7ಕ್ಕೆ ಮತ್ತೆ ವಾತಾವರಣವನ್ನು ಪ್ರವೇಶಿಸುತ್ತದೆ ಎಂದು ನಿರೀಕ್ಷಿಸುತ್ತಿದೆ. ಆದರೆ ಸಮಯ ಬದಲಾಗಬಹುದು.
ವಾತಾವರಣದ ಮೂಲಕ ಪ್ರವೇಶಿಸುವಾಗ ಹೆಚ್ಚಿನ ಬಾಹ್ಯಾಕಾಶ ನೌಕೆಗಳು ಸುಟ್ಟುಹೋಗುತ್ತವೆ ಎಂದು NASA ನಿರೀಕ್ಷಿಸುತ್ತದೆ. ಆದರೆ ಕೆಲವು ಘಟಕಗಳು ಮರು-ಪ್ರವೇಶದಿಂದ ಬದುಕುಳಿಯುವ ನಿರೀಕ್ಷೆಯಿದೆ. ಆದರೆ ಈ ವೇಳೆ
ಉಪಗ್ರಹದಿಂದ ಭೂಮಿಯ ಮೇಲೆ ಯಾರಿಗಾದರೂ ಹಾನಿಯಾಗುವ ಅಪಾಯ ಕಡಿಮೆ ಎಂದಿದೆ.
ಸೌರ ಜ್ವಾಲೆಗಳಲ್ಲಿ ಉತ್ಪತ್ತಿಯಾಗುವ ಶಕ್ತಿಯ ಗಮನಾರ್ಹ ಭಾಗವನ್ನು ಸಾಗಿಸುವ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್ಗಳನ್ನು ಸ್ಕ್ಯಾನ್ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಇದನ್ನು ಆರ್ಬಿಟಲ್ ಸೈನ್ಸಸ್ ಕಾರ್ಪೊರೇಶನ್ ಪೆಗಾಸಸ್ ಎಕ್ಸ್ ಎಲ್ ರಾಕೆಟ್ ಮೇಲೆ ಉಡಾವಣೆ ಮಾಡಲಾಯಿತು.