alex Certify ಏಪ್ರಿಲ್ 19ಕ್ಕೆ ತೆರೆ ಮೇಲೆ ಬರಲಿದೆ ʼನಾಲ್ಕನೆ ಆಯಾಮ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಪ್ರಿಲ್ 19ಕ್ಕೆ ತೆರೆ ಮೇಲೆ ಬರಲಿದೆ ʼನಾಲ್ಕನೆ ಆಯಾಮ’

ಈಗಾಗಲೇ ತನ್ನ ಟೈಟಲ್ಲಿಂದಲೇ ಭರ್ಜರಿ ಸೌಂಡ್ ಮಾಡಿರುವ ‘ನಾಲ್ಕನೇ ಆಯಾಮ’ ಚಿತ್ರ ಇದೆ ಏಪ್ರಿಲ್ 19ಕ್ಕೆ ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಗೌತಮ್ ಮತ್ತು ನಟಿ ರಚನಾ ಇಂದರ್ ವಿಡಿಯೋ ಮುಖಾಂತರ  ತಿಳಿಸಿದ್ದಾರೆ.

ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಕಥಾಹಂದರ  ಹೊಂದಿರುವ ಈ ಸಿನಿಮಾವನ್ನು ಗೌತಮ್ ಆರ್ ನಿರ್ದೇಶಿಸುವುದರ ಜೊತೆಗೆ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಇಂಚರ ಕ್ರಿಯೆಷನ್ಸ್ ಬ್ಯಾನರ್ ನಲ್ಲಿ ಅರುಣ ಮುತ್ತುರಾಯಪ್ಪ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಗೌತಮ್ ಆರ್ ಮತ್ತು ರಚನಾ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದು, ಶ್ರೀಕಾಂತ್ ಸಂಕಲನ, ಆಯುಷ್ ನೃತ್ಯ ನಿರ್ದೇಶನ, ಬ್ರಹ್ಮೇಂದ್ರ ಛಾಯಾಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...