ನಮ್ಮ ಸೌರ ಮಂಡಲದಲ್ಲಿ ಜರುಗುವ ವಿಶಿಷ್ಟ ಘಟನಾವಳಿಗಳ ಚಿತ್ರಗಳನ್ನು ನಿಯಮಿತವಾಗಿ ಶೇರ್ ಮಾಡುವ ನಾಸಾ ಖಗೋಳ ಪ್ರೇಮಿಗಳಿಗೆ ಸದಾ ಒಂದಿಲ್ಲೊಂದು ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿರುತ್ತದೆ.
ನಾಸಾದ ನ್ಯೂ ಹಾರಿಜ಼ಾನ್ಸ್ ಬಾಹ್ಯಾಕಾಶನೌಕೆ ಪ್ಲೂಟೋದ ಮೇಲ್ಮೈನಲ್ಲಿ ಕಂಡು ಬಂದಿರುವ ಹಿಮಗಲ್ಲನ್ನು ಸೆರೆ ಹಿಡಿದಿದೆ. ಹೃದಯಾಕೃತಿಯಲ್ಲಿರುವ ಈ ಹಿಮಗಲ್ಲಿನ ಚಿತ್ರಗಳನ್ನು ನಾಸಾ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.
ಪ್ಲೂಟೂದಲ್ಲಿ ಮೀಥೇನ್ ಹಾಗೂ ನೈಟ್ರೋಜನ್ ಐಸ್‌ನಿಂದ ಸೃಷ್ಟಿಯಾಗಿರುವ ಬೆಟ್ಟಗಳು, ಕಣಿವೆಗಳು, ಕುಳಿಗಳು ಹಾಗೂ ಮೈದಾನಗಳಿರುವ ಮಂಜಿನ ಜಗತ್ತಾದ ಪ್ಲೂಟೋ ಸೂರ್ಯನಿಂದ 590 ಕೋಟಿ ಕಿಮೀ ದೂರದಲ್ಲಿದೆ ಎಂದು ನಾಸಾ ವಿವರಿಸಿದೆ.